Bengaluru, ಮಾರ್ಚ್ 29 -- ಚಾಟ್ ಜಿಪಿಟಿ ಎನ್ನುವುದು ಇಂದು ಬಹುತೇಕ ಎಲ್ಲರಿಗೂ ತಿಳಿದಿರುವ ಎಐ ಟೂಲ್. ಓಪನ್ ಎಐ ಬಿಡುಗಡೆ ಮಾಡಿರುವ ಚಾಟ್‌ ಜಿಪಿಟಿಯಲ್ಲಿ ಹೊಸ ರೀತಿಯ ಘಿಬ್ಲಿ ಆರ್ಟ್ ಒಂದು ಈಗ ಜನಪ್ರಿಯತೆ ಪಡೆದುಕೊಂಡಿದೆ. ಚಾಟ್ ಜಿಪಿಟಿ ಬಳಕೆದಾರರು ಮಾತ್ರವಲ್ಲದೇ, ತಮ್ಮದೇ ಫೋಟೊದ ಅನಿಮೇಶನ್ ಬಯಸುವವರು ಕೂಡ ಚಾಟ್ ಜಿಪಿಟಿ ಮೂಲಕ ಘಿಬ್ಲಿ ಆರ್ಟ್ ಟ್ರೈ ಮಾಡುತ್ತಿದ್ದಾರೆ. ನೀವು ಕೂಡ ಘಿಬ್ಲಿ ಆರ್ಟ್ ಪ್ರಿಯರಾಗಿದ್ದರೆ, ಇಲ್ಲಿ ಹೇಳಿರುವ ಸರಳ ಟಿಪ್ಸ್ ಬಳಸಿ, ನಿಮ್ಮ ಅಥವಾ ನಿಮ್ಮ ಗೆಳೆಯರ ಘಿಬ್ಲಿ ಶೈಲಿಯ ಆರ್ಟ್ ರಚಿಸಬಹುದು. ಅದಕ್ಕಾಗಿ ನೀವು ಯಾವುದೇ ಹೆಚ್ಚುವರಿ ಅಪ್ಲಿಕೇಶನ್ ಬಳಸಬೇಕಿಲ್ಲ, ಅದರ ಬದಲು ಚಾಟ್ ಜಿಪಿಟಿ ಇದ್ದರೆ ಸಾಕು.

ಇಂಟರ್‌ನೆಟ್‌ನಲ್ಲಿ ಈಗ ಟ್ರೆಂಡ್‌ನಲ್ಲಿರುವುದು ಬೆರಗುಗೊಳಿಸುವ ಘಿಬ್ಲಿ ಸ್ಟೈಲ್ ಚಿತ್ರಗಳು. ಅನೇಕ ಬಳಕೆದಾರರು ತಮ್ಮದೇ ಆದ ಘಿಬ್ಲಿ ರಚಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಹಲವರು ಘಿಬ್ಲಿ ಆರ್ಟ್ ರಚಿಸಲು ಪ್ರಯತ್ನಿಸಲು ಉತ್ಸುಕರಾಗಿದ್ದಾರೆ. ಈ ಟ...