ಭಾರತ, ಏಪ್ರಿಲ್ 2 -- Ghibli-Style AI Images with Grok 3: ಘಿಬ್ಲಿ ಶೈಲಿಯ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನಾವು ನಮ್ಮ ಫೋಟೋವನ್ನು ಎಐ ಮೂಲಕ ಘಿಬ್ಲಿ ಅನಿಮೇಷನ್‌ ಚಿತ್ರಗಳಾಗಿ ಪರಿವರ್ತಿಸುವ ಅವಕಾಶ ಈಗ ಇದೆ. ನಾವು ನಮ್ಮ ಫೋಟೋ ಅಪ್ಲೋಡ್‌ ಮಾಡಿದರೆ ಎಐ ಅದನ್ನು ಘಿಬ್ಲಿ ಕಲೆಯ ಸ್ವರೂಪದಲ್ಲಿ ಬದಲಿಸಿಕೊಡುತ್ತದೆ. ಈಗ ಸೋಷಿಯಲ್‌ ಮೀಡಿಯಾದಲ್ಲಿ ಇಂತಹ ಫೋಟೋಗಳನ್ನು ನೋಡಿದಾಗ ನೀವು ಕೂಡ ಗೂಗಲ್‌ನಲ್ಲಿ ಘಿಬ್ಲಿ ಶೈಲಿಯ ಫೋಟೋಗಳನ್ನು ರಚಿಸಲು ಹುಡುಕಬಹುದು. ಆದರೆ, ನಿಮ್ಮ ದಾರಿ ತಪ್ಪಿಸಲು ಹಲವು ವೆಬ್‌ಸೈಟ್‌ಗಳು ಕಾದಿರುತ್ತವೆ. ಕೆಲವೊಂದು ವೆಬ್‌ಸೈಟ್‌ಗಳು ಅತ್ಯುತ್ತಮವಾಗಿ ಘಿಬ್ಲಿ ಚಿತ್ರಗಳನ್ನು ರಚಿಸಲಾರವು. ಇನ್ನು ಕೆಲವು ನಿಮ್ಮನ್ನು ಲಾಗಿನ್‌ ಮಾಡಿಸಿಕೊಂಡು ಹಣ ಪಾವತಿಸುವಂತೆ ಕೇಳಬಹುದು. ಚಾಟ್‌ಜಿಪಿಟಿಗೆ ಹೋಗಿ ಫೋಟೋ ಅಪ್ಲೋಡ್‌ ಮಾಡಿ ಘಿಬ್ಲಿ ಶೈಲಿಯಲ್ಲಿ ಫೋಟೋ ರಚಿಸುವಂತೆ ಪ್ರಾಂಪ್ಟ್‌ ನೀಡಿದರೆ ಅದು ಕೂಡ ಕ್ಷಣಾರ್ಧದಲ್ಲಿ ನೀವು ಅಪ್ಲೋಡ್‌ ಮಾಡಿದ ಫೋಟೋದ ಘಿಬ್ಲಿ ರೂಪವನ್ನು ನೀಡುತ್ತದೆ....