ಭಾರತ, ಫೆಬ್ರವರಿ 25 -- Ghatashraddha: ಗಿರೀಶ್ ಕಾಸರವಳ್ಳಿಯವರು 1978ರಲ್ಲಿ ನಿರ್ದೇಶಿಸಿದ್ದ ಡಾ.ಯು. ಆರ್. ಅನಂತಮೂರ್ತಿಯವರ ಕತೆ ಆಧರಿಸಿದ ಚಿತ್ರ ಘಟಶ್ರಾದ್ಧ ಹಲವು ಪ್ರಥಮಗಳನ್ನು ಕನ್ನಡಕ್ಕೆ ತಂದುಕೊಟ್ಟ ಚಿತ್ರ. 90 ವರ್ಷಗಳ ಕನ್ನಡ ಚಿತ್ರ ಇತಿಹಾಸದಲ್ಲಿ ಕನ್ನಡದ ಆರು ಚಿತ್ರಗಳಿಗೆ ಮಾತ್ರ ರಾಷ್ಟ್ರಪತಿಗಳ ಸ್ವರ್ಣ ಕಮಲ ಲಭ್ಯವಾಗಿದ್ದು, ಅವುಗಳಲ್ಲಿ ನಾಲ್ಕು ಕಾಸರವಳ್ಳಿ ನಿರ್ದೇಶನದ ಚಿತ್ರಗಳಾಗಿವೆ. ಘಟಶ್ರಾದ್ಧ ಆ ಸರಣಿಯಲ್ಲಿ ಮೊದಲನೆಯದು.

ಭಾರತೀಯ ಸಿನಿಮಾದ ಶತಮಾನೋತ್ಸವ ಸಂದರ್ಭದಲ್ಲಿ ಶತಮಾನದ 20 ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿತವಾದ ಘಟಶ್ರಾದ್ಧ ಚಿತ್ರ ಅನೇಕ ಅಂತಾರಾಷ್ಟೀಯ ಪ್ರಶಸ್ತಿಗೆ ಮನ್ನಣೆ ಗಳಿಸಿತ್ತು. ಇದೀಗ ಅದಕ್ಕೆ ಪುನರುಜ್ಜೀವನ (ರೆಸ್ಟೋರೇಷನ್)ದ ಅವಕಾಶ ಸಿಕ್ಕಿದೆ. ಜಾಗತಿಕ ಸಿನಿಮಾದ ಶ್ರೇಷ್ಠ ನಿರ್ದೇಶಕರೊಲ್ಲೊಬ್ಬರಾದ ಹಾಲಿವುಡ್ ಚಿತ್ರರಂಗದ ಮಾರ್ಟಿನ್ ಸ್ಕಾರ್ಸೆಸಿಯವರ ಸಿನಿಮಾ ಫೌಂಡೇಷನ್ ಮತ್ತು ಶಿವೇಂದ್ರ ಸಿಂಗ್ ಅವರ ಫಿಲ್ಮ್ ಹೆರಿಟೇಜ್ ಫೌಂಡೇಷನ್ ಜಂಟಿಯಾಗಿ ಈ ಕಾರ್ಯ ಆರಂಭಿಸಿವೆ....