ಭಾರತ, ಫೆಬ್ರವರಿ 6 -- ಘರತ್ ಗಣಪತಿ ಇದೊಂದು ಮರಾಠಿ ಸಿನಿಮಾ. ಅವಿಭಜಿತ ಕುಟುಂಬಗಳಲ್ಲೂ ಆರ್ಥಿಕ ವಿಭಜನೆಯಾದಾಗ ಯಾವ ರೀತಿ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ. ಹಿರಿಯರ ನೋವು, ಕಿರಿಯರ ಪಾಡು, ದುಡಿಯುವ ಮನಸ್ಸು, ಹತಾಷೆ, ಪ್ರೀತಿ ಎಲ್ಲ ಭಾವನೆಗಳೂ ಈ ಸಿನಿಮಾದಲ್ಲಿದೆ. ಎಲ್ಲ ವಯೋಮಾನದವರೂ ನೋಡಿ ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂಬ ಮನಸ್ಥಿತಿಯನ್ನು ತಂದುಕೊಡುವ ಸಿನಿಮಾ ಇದಾಗಿದೆ. ತುಂಬಾ ಜನರ ಮನೆಯ ಸಮಸ್ಯೆಯನ್ನು ಒಂದೇ ಒಂದು ಗಣೇಶ ಚತುರ್ಥಿಯ ಆಚರಣೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಈ ಸಿನಿಮಾದ ಹೆಸರು 'ಘರತ್ ಗಣಪತಿ' ಎಂಬುದಾಗಿದೆ.

ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಜ್ಜ, ಅಜ್ಜಿ, ಅತ್ತೆ, ಮಾವ, ದೊಡ್ಡಮ್ಮ, ದೊಡ್ಡಪ್ಪ, ಅಕ್ಕ, ತಮ್ಮ ಹೀಗೆ ಹೇಳುತ್ತಾ ಹೋದರೆ ಸಂಬಂಧಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಹಿಂದೆ ಈ ಎಲ್ಲರೂ ಒಂದೇ ಮನೆಯಲ್ಲಿ ಒಟ್ಟಾಗಿ ಬಾಳ್ವೆ ಮಾಡುತ್ತಿದ್ದರು. ನಂತರ ಕ್ರಮೇಣ ಸಮಾಜದಲ್ಲಿ ಬದಲಾವಣೆ ಉಂಟಾಯಿತು. ಮನೆಯಲ್ಲಿ ಜನ ಹೆಚ್ಚಾದ ಹಾಗ...