ಭಾರತ, ಮಾರ್ಚ್ 21 -- Ghajini 2: ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಎಆರ್‌ ಮುರುಗಾದಾಸ್‌ ಅವರು ಸಲ್ಮಾನ್‌ ಜತೆ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಇದೇ ಸಮಯದಲ್ಲಿ ಮುರುಗಾದಾಸ್‌ ಅವರು ಗಜಿನಿ ಸಿನಿಮಾದ ಹೊಸ ಅಪ್‌ಡೇಟ್‌ ನೀಡಿ ಅಭಿಮಾನಿಗಳಿಗೆ ಪುಳಕ ತಂದಿದ್ದಾರೆ 2008ರಲ್ಲಿ ಬಿಡುಗಡೆಯಾದ ಗಜಿನಿ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆದಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರ್ದೇಶಕರು ಗಜಿನಿ 2 ಕುರಿತಂತೆ ಮಾತನಾಡಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್‌ ಅವರು ಗಜಿನಿ ಫ್ರಾಂಚೈಸಿ ಮುಂದುವರೆಸಲು ಬಯಸಿದ್ದಾರೆ. ಹೀಗಾಗಿ, ಈ ಸಿನಿಮಾ ಮಾಡುವ ಕುರಿತು ಐಡಿಯಾ ಇದೆ ಎಂದು ಅವರು ಹೇಳಿದ್ದಾರೆ.

2008ರಲ್ಲಿ ತಮಿಳು ಗಜಿನಿ ಸಿನಿಮಾದ ಹಿಂದಿ ವರ್ಷನ್‌ ಬಿಡುಗಡೆಯಾಗಿತ್ತು. ತಮಿಳಿನಲ್ಲಿ ಸೂರ್ಯ ನಟಿಸಿದ್ದರು. ಈ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಹಿಂದಿಯಲ್ಲಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದ ಮೊದಲ ಬಾಲಿವುಡ್‌ ಸಿನಿಮಾ ...