Bangalore, ಫೆಬ್ರವರಿ 10 -- Gemstones: ಜ್ಯೋತಿಷ್ಯದಲ್ಲಿ ಕೆಲವು ರತ್ನದ ಕಲ್ಲುಗಳನ್ನು ಧರಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಪ್ರೀತಿ, ವೃತ್ತಿಜೀವನ, ಆರೋಗ್ಯ ಹಾಗೂ ಆರ್ಥಿಕ ವಿಷಯಗಳು ಸೇರಿದಂತೆ ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ಸಿಕ್ಕ ಸಿಕ್ಕ ರತ್ನಗಳನ್ನು ತಮಗೆ ತೋಚಿದ ಬೆರಳುಗಳಿಗೆ ಧರಿಸುವಂತಿಲ್ಲ ಎಂದು ರತ್ನದ ಜ್ಯೋತಿಷ್ಯ ಹೇಳುತ್ತದೆ. ಹರಳುಗಳನ್ನು ಧರಿಸುವ ಮೊದಲು ಜ್ಯೋತಿಷ್ಯದ ಸಲಹೆಯನ್ನು ತೆಗೆದುಕೊಳ್ಳಬೇಕು ಮತ್ತು ಜಾತಕದಲ್ಲಿ ಗ್ರಹಗಳ ಶುಭ ಮತ್ತು ಅಶುಭ ಸ್ಥಾನದ ಬಗ್ಗೆ ಮಾಹಿತಿ ಪಡೆದ ನಂತರವೇ ರತ್ನವನ್ನು ಧರಿಸಬೇಕು.

ರತ್ನ ಶಾಸ್ತ್ರದಲ್ಲಿ 9 ರತ್ನಗಳನ್ನು ಉಲ್ಲೇಖಿಸಲಾಗಿದೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಹವಳ, ಬುಧನಿಗೆ ಪಚ್ಚೆ, ಗುರುಗ್ರಹಕ್ಕೆ ಹಳದಿ ನೀಲಮಣಿ, ಶುಕ್ರನಿಗೆ ವಜ್ರ, ಶನಿಗೆ ನೀಲಮಣಿ, ರಾಹುವಿಗೆ ಒನಿಕ್ಸ್ ಮತ್ತು ಕೇತುವಿಗೆ ಲೆಹ್ಸುನಿಯಾ ರತ್ನವನ್ನು ಧರಿಸಲಾಗುತ್ತದೆ. ವಜ್ರ, ಪಚ್ಚೆ, ಮುತ್ತು, ನೀಲಮಣಿ ಸೇರಿದಂತೆ 9...