Bangalore, ಮಾರ್ಚ್ 14 -- Who is Gauri Spratt?: ಬಾಲಿವುಡ್‌ ನಟ ಅಮೀರ್ ಖಾನ್ ತನ್ನ 60ನೇ ಹುಟ್ಟುಹಬ್ಬದ ಸಮಯದಲ್ಲಿ ತನ್ನ ಗೆಳತಿ ಮತ್ತು ಸಂಗಾತಿ ಗೌರಿ ಸ್ಪ್ರಾಟ್‌ ಅವರನ್ನು ಪರಿಚಯಿಸಿದ್ದಾರೆ. ಗೌರಿ ಬೆಂಗಳೂರು ಮೂಲದವರು. ಈಕೆಗೆ 6 ವರ್ಷದ ಮಗನಿದ್ದಾನೆ. ಅಮೀರ್ ಖಾನ್ ಈಗಾಗಲೇ ಇಬ್ಬರು ಮಕ್ಕಳ ಅಪ್ಪ. ತನ್ನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಮುಂದೆ ತನ್ನ ಗೆಳತಿ, ಸಂಗಾತಿಯನ್ನು ಬಾಲಿವುಡ್‌ ನಟ ಅಮಿರ್‌ ಖಾನ್‌ ಪರಿಚಯಿಸಿದ್ದಾರೆ. ಅಮೀರ್ ಖಾನ್ ಅವರು ಬಾಲಿವುಡ್‌ನ ಜನಪ್ರಿಯ ನಟ. ತನ್ನ ಕರಿಯರ್‌ನಲ್ಲಿ ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ. ವೃತ್ತಿಪರ ಬದುಕು ಮಾತ್ರವಲ್ಲದೆ ಇವರ ವೈಯಕ್ತಿಕ ಬದುಕು ಕೂಡ ಹಲವು ಬಾರಿ ಸುದ್ದಿಯಾಗಿದೆ. ಈ ಹಿಂದೆ ತನ್ನ ಪತ್ನಿಗೆ ಇವರು ಡಿವೋರ್ಸ್‌ ನೀಡಿದ್ದರು. ಸದ್ಯ ಅಮಿರ್‌ ಖಾನ್‌ ಪರಿಚಯಿಸಿದ ಗೌರಿ ಸ್ಪ್ರಾಟ್‌ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಅಮೀರ್ ಖಾನ್ ಅವರ ಹೊಸ ಗೆಳತಿಯ ಹೆಸರು ಗೌರಿ ಸ್ಪಾರ್ಟ್‌. ಬೆಂಗಳೂರು ಮೂಲದವರು. ಈಕೆಗೆ 6 ವರ್ಷದ ಮಗನಿದ್ದ...