ಭಾರತ, ಫೆಬ್ರವರಿ 21 -- ಹಿಂದೂ ಧರ್ಮದ 18 ಮಹಾ ಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಈ ಪುರಾಣವು ಮನುಷ್ಯ ಜನ್ಮದಲ್ಲಿ ಪಾಪಗಳನ್ನು ಮಾಡಿದರೆ ಮರಣದ ನರಕವನ್ನು ಸೇರುತ್ತಾರೆ ಮತ್ತು ಅಲ್ಲಿ ಭೀಕರ ಶಿಕ್ಷೆಗಳನ್ನು ಅನುಭವಿಸುತ್ತಾರೆ ಎಂದು ಹೇಳುತ್ತದೆ. ಗುರುಡ ಪುರಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ಬಗ್ಗೆಯೂ ಬರೆಯಲಾಗಿದೆ. ಅವರಿಗೆ ಎಂತಹ ಶಿಕ್ಷೆ ಸಿಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಲೈಂಗಿಕ ದೌರ್ಜನ್ಯ ಎಸಗುವವರಿಗೆ, ಮಹಿಳೆಯರನ್ನು ಕೀಳಾಗಿ ಕಾಣುವವರಿಗೆ ಅಥವಾ ಮಹಿಳೆಯರನ್ನು ಶೋಷಿಸುವವರಿಗೆ ಮರಣದ ನಂತರ ನರಕದಲ್ಲಿ ಘೋರ ಶಿಕ್ಷೆ ಸಿಗುತ್ತದೆ ಎಂದು ಗರುಡ ಪುರಾಣವು ಹೇಳುತ್ತದೆ.

ಮಹಿಳೆಯರನ್ನು ನಿಂದಿಸುವ ವ್ಯಕ್ತಿಯು ನರಕಕ್ಕೆ ಹೋದಾಗ, ಅಂತಹ ವ್ಯಕ್ತಿಯನ್ನು ಕುದಿಯುವ ಎಣ್ಣೆಯಲ್ಲಿ ಎಸೆಯಲಾಗುತ್ತದೆ. ಆ ವ್ಯಕ್ತಿಯ ದೇಹದ ಮೇಲೆ ಕಬ್ಬಿಣವನ್ನು ಕರಗಿಸಿ ಸುರಿಯಲಾಗುತ್ತದೆ ಎಂದು ಮಹಿಳೆಯರನ್ನು ಹಿಂಸಿಸಿದವರಿಗೆ ವಿಧಿಸುವ ಭೀಕರ ಶಿಕ್ಷೆಗಳ ಬಗ್ಗೆ ಗರುಡ ಪುರಾಣವು ತಿಳಿಸಿದೆ. ಹಾಗಾದರೆ ಗರುಡ ಪುರಾಣದ ಪ್ರಕಾರ ಮಹಿಳೆಯ...