ಭಾರತ, ಫೆಬ್ರವರಿ 26 -- ಗುಲಾಬಿ ಗಿಡಗಳಲ್ಲಿ ಗೊಂಚಲು ಗೊಂಚಲು ಹೂ ಅರಳುವ ಸಮಯ ಬಂದಿದೆ. ವಸಂತಕಾಲದಲ್ಲಿ ಗುಲಾಬಿ ಹೂಗಳು ಸುಂದರವಾಗಿ ಅರಳಲು ಆರಂಭಿಸುತ್ತವೆ. ಗುಲಾಬಿ ಗಿಡಗಳನ್ನು ಚೆನ್ನಾಗಿ ಬೆಳೆದು, ಸುಂದರವಾಗಿ ಹೂ ಬಿಡಬೇಕು ಅಂದರೆ ಅವುಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಈ ಸಮಯದಲ್ಲಿ ಗಿಡಗಳ ಆರೈಕೆ ಮಾಡಿಲ್ಲ ಎಂದರೆ ಹೂ ಚೆನ್ನಾಗಿ ಬಿಡುವುದಿಲ್ಲ.

ಚಳಿಗಾಲದ ನಂತರ ಗುಲಾಬಿ ಗಿಡಗಳಿಗೆ ಎಚ್ಚರಿಕೆಯ ಆರೈಕೆಯ ಅಗತ್ಯವಿದೆ. ಇದಕ್ಕೆ ಸರಿಯಾದ ಗೊಬ್ಬರ, ನೀರು, ಕೀಟ ನಿಯಂತ್ರಣ ಮತ್ತು ಸಮರುವಿಕೆ ಅಗತ್ಯ. ಫೆಬ್ರುವರಿಯಲ್ಲಿ ಅಂದರೆ ಬೇಸಿಗೆಯ ಆರಂಭದಲ್ಲಿ ಈ ಕೆಲಸಗಳನ್ನು ಮಾಡಿದರೆ ನಂತರ ಗುಲಾಬಿ ಹೂಗಳು ಚೆನ್ನಾಗಿ ಅರಳಲು ಪ್ರಾರಂಭವಾಗುತ್ತದೆ.

ಚಳಿಗಾಲದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗುಲಾಬಿ ಗಿಡವು ಸುಪ್ತ ಸ್ಥಿತಿಗೆ ಹೋಗುತ್ತದೆ. ತಾಪಮಾನ ಕಡಿಮೆ ಅದು ಬೆಳೆಯುವುದನ್ನು ನಿಲ್ಲಿಸುತ್ತದೆ. ಎಲೆಗಳು ಉದುರಲು ಪ್ರಾರಂಭವಾಗುತ್ತದೆ. ಆದರೆ ಋತುಮಾನ ಬದಲಾವಂತೆ ಮತ್ತೆ ಅರಳಲು ಆರಂಭಿಸುತ್ತದೆ.

* ಫೆಬ್ರವರಿಯಲ್ಲಿ ಮೊಗ್...