Bengaluru, ಫೆಬ್ರವರಿ 7 -- Game Changer OTT: ಟಾಲಿವುಡ್ ನಟ ರಾಮ್ ಚರಣ್ ನಾಯಕನಾಗಿ ನಟಿಸಿದ ಗೇಮ್ ಚೇಂಜರ್ ಸಿನಿಮಾ ಇಂದಿನಿಂದ (ಫೆಬ್ರವರಿ 7) ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಆದಾಗ್ಯೂ, ಹಿಂದಿ ಆವೃತ್ತಿ ಬಗ್ಗೆ ಈ ವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಹಿಂದಿಯಲ್ಲಿ ಕೊಂಚ ವಿಳಂಬವಾಗಲಿದೆ ಎನ್ನಲಾಗುತ್ತಿದೆ.
ಸಹಜವಾಗಿ ಕೆಲವು ಸಿನಿಮಾಗಳು ಚಿತ್ರಮಂದಿರಗಳಿಗಿಂತಲೂ ಹೆಚ್ಚಿನ ದೃಶ್ಯಗಳ ಜತೆಗೆ ಒಟಿಟಿಗೆ ಆಗಮಿಸಿದ ಉದಾಹರಣೆಗಳಿವೆ. ಇತ್ತೀಚೆಗಷ್ಟೇ ಪುಷ್ಪ 2 ಸಿನಿಮಾ ಹೆಚ್ಚುವರಿ ದೃಶ್ಯಗಳ ಜತೆಗೆ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಅದೇ ರೀತಿ ಗೇಮ್ ಚೇಂಜರ್ ಸಿನಿಮಾ ಸಹ ಒಟಿಟಿಗೆ ಬರಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಯಾವುದೇ ಬದಲಾವಣೆ ಮಾಡಿಕೊಳ್ಳದೆ, ಚಿತ್ರಮಂದಿರಗಳಲ್ಲಿನ ರನ್ ಟೈಮ್ 2 ಗಂಟೆ 37 ನಿಮಿಷಗಳ ಅದೇ ವರ್ಷನ್ ಒಟಿಟಿಗೆ ಬಂದಿದೆ.
ಇದನ್ನೂ ಓದಿ: ವಿಕ್ಟರಿ ವೆಂಕಟೇಶ್ ...
Click here to read full article from source
To read the full article or to get the complete feed from this publication, please
Contact Us.