Bengaluru, ಫೆಬ್ರವರಿ 12 -- ಸ್ನೇಹವೆಂದರೆ ಹಾಗೇ, ಅದೊಂದು ಸಂಬಂಧ ಮಾತ್ರವಲ್ಲ. ಅದೊಂದು ಸುಂದರ ಭಾವನೆ, ಭರವಸೆ ಮತ್ತು ನಂಬಿಕೆ. ಸ್ನೇಹವನ್ನ ಸಂಭ್ರಮಿಸೋಕೆ ಸ್ನೇಹಿತರ ದಿನವಿದೆ. ಆದರೆ ಮಹಿಳಾ ಸ್ನೇಹಿತರಿಗೆಂದೇ ಒಂದು ವಿಶೇಷ ದಿನವಿದೆ ಅನ್ನೋದು ನಿಮಗೆ ಗೊತ್ತಾ? ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ನೇಹಿತರ ಗುಂಪೊಂದು ಸದಾ ಜೊತೆಯಾಗಿರುತ್ತದೆ. ಕಷ್ಟ, ಸುಖ, ನಗು, ಅಳು ಎಲ್ಲದರಲ್ಲೂ ಇವರು ಭಾಗಿಯಾಗುತ್ತಾರೆ. ಯಾರಲ್ಲೂ ಹಂಚಿಕೊಳ್ಳಲಾಗದ ನೋವು ದುಗುಡಗಳನ್ನೆಲ್ಲಾ ತಮ್ಮ ಸ್ನೇಹಿತೆ ಅಥವಾ ಸ್ನೇಹಿತೆಯರೊಂದಿಗೆ ಹಂಚಿಕೊಂಡರಷ್ಟೇ ಎಷ್ಟೋ ಜನರಿಗೆ ಸಮಾಧಾನ. ಅಂತಹ ನಿಮ್ಮ ವಿಶೇಷ ಸ್ನೇಹಿತೆಯರಿಗಾಗಿಯೇ ಈ ಗ್ಯಾಲೆಂಟೈನ್ಸ್ ಡೇ ಎಂಬ ವಿಶೇಷ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಅದೂ ಯಾವಾಗ ಗೊತ್ತಾ, ವ್ಯಾಲೈಂಟೈನ್ಸ್ ಡೇ ಹಿಂದಿನ ದಿನ ಅಂದರೆ ಫೆಬ್ರವರಿ 13.

ಗ್ಯಾಲೆಂಟೈನ್ಸ್ ದಿನ. ನಿಮ್ಮ ಸೇಹದ ಭಾಗವಾಗಿರುವ ನಿಮ್ಮ ಸ್ನೇಹಿತೆಯರಿಗೊಂದು ಕೃತಜ್ಞತೆ ತಿಳಿಸುವ ದಿನ, ಪ್ರಣಯ ಪ್ರೇಮದಾಚೆಗೆ ನಿಮ್ಮ ನೋವಿಗೊಂದು ಸಾಂತ್ವನ ಹೇಳಿದ...