ಭಾರತ, ಏಪ್ರಿಲ್ 12 -- ಗಗನಾ ಭಾರಿ... ಇತ್ತೀಚಿಗೆ ಈ ಹೆಸರು ಕನ್ನಡ ಕಿರುತೆರೆ ವಲಯದಲ್ಲಿ ಸಖತ್ ಫೇಮಸ್‌. ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಮೂಲಕ ಟಿವಿ ಪರದೆಯಲ್ಲಿ ಕಾಣಿಸಿದ ಗಗನ ಈಗ ಕರುನಾಡ ಜನರಿಗೆ ಚಿರಪರಿಚಿತರು. ಮಹಾನಟಿ ನಂತರ ಆಕೆ ಡಾನ್ಸ್ ಕರ್ನಾಟಕ ಡಾನ್ಸ್‌, ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2ರಲ್ಲೂ ಭಾಗವಹಿಸುತ್ತಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್‌ ಪ್ರತಾಪ್‌ಗೆ ಜೋಡಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

ಭರ್ಜರಿ ಬ್ಯಾಚುಲರ್‌ ವೇದಿಕೆಯಲ್ಲಿ ವಿವಿಧ ಟಾಸ್ಕ್‌ಗಳಲ್ಲಿ ಸಖತ್ ಆಗಿ ಪರ್ಫಾಮೆನ್ಸ್ ಕೊಡುವ ಮೂಲಕ ಜನರಿಗೆ ಇಷ್ಟವಾಗುತ್ತಿದೆ ಪ್ರತಾಪ್‌-ಗಗನಾ ಜೋಡಿ. ಈ ನಡುವೆ ಜೀ ಕನ್ನಡ ಟಿಆರ್‌ಪಿ ಕಿಂಗ್ ಎಂದೇ ಪ್ರೇಕ್ಷಕರಿಂದ ಕರೆಸಿಕೊಳ್ಳುವ ಗಿಲ್ಲಿ ನಟ ಗಗನಾಳನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಗಿಲ್ಲಿ ನಟ ಪಂಚಿಂಗ್ ಡೈಲಾಗ್‌ಗಳನ್ನು ಹೇಳುತ್ತಾ ಗಗನಾಳ ಕಾಲೆಳೆಯುವುದು ನೋಡಲು ಮಜಾ ಇರುತ್ತದೆ. ಗಗನ ಹಾಗೂ ಗಿಲ್ಲಿ ಇಬ್ಬರು ಜೀ ಕನ್ನಡಕ್ಕೆ ಟಿಆರ್‌ಪಿ ತಂದುಕೊಡುವವರು ಎಂದು...