Gadag, ಫೆಬ್ರವರಿ 13 -- ಗದಗ: ಗದಗ ನಗರದ ಬೆಟಗೇರಿಯಲ್ಲಿ ಹಲವು ವರ್ಷಗಳಿಂದ ಬಡ್ಡಿ ವಹಿವಾಟು ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್‌ ಎಂಬ ವ್ಯಕ್ತಿಯನ್ನು ಗದಗ ಜಿಲ್ಲಾ ಪೊಲೀಸರು ವಶಕ್ಕೆ ಪಡದುಕೊಂಡು ಆತನ ಬಳಿ ಸಂಗ್ರಹಿಸಿಕೊಟ್ಟುಕೊಂಡಿದ್ದ ಸುಮಾರು ಐದು ಕೋಟಿ ರೂ. ನಗದು ಹಾಗು ಚಿನ್ನಾಭರಣಗಳು, ಕೋಟ್ಯಂತರ ರೂ. ಮೌಲ್ಯದ ಬಾಂಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ಸಂಗ್ರಹ, ದಾಖಲೆ ವಿನಿಮಯಕ್ಕೆ ಆತ ಕಚೇರಿ ಸ್ಥಾಪಿಸಿಕೊಂಡು ಲಾಕರ್‌ಗಳಲ್ಲಿ ಹಣ, ದಾಖಲೆಗಳನ್ನು ಆತ ಬಚ್ಚಿಟ್ಟಿದ್ದು ವಿಚಾರಣೆ ವೇಳೆ ಬಯಲಾಗಿದ್ದು, ದೊಡ್ಡ ಟ್ರಂಕ್‌ನಲ್ಲಿ ಹಣ ಹಾಗೂ ಆಭರಣಗಳನ್ನು ತುಂಬಿಕೊಂಡು ಚೀಲಗಳಲ್ಲಿ ದಾಖಲೆ ಪತ್ರ ಕಟ್ಟಿಕೊಂಡು ಪೊಲೀಸರು ಹೋಗಿದ್ದಾರೆ. ಒಟ್ಟು13 ಕಡೆ ಸತತ ಎರಡು ದಿನಗಳ ಕಾಲ ದಾಖಲೆ ಪರಿಶೀಲನೆ ನಡೆದಿದೆ.

Published by HT Digital Content Services with permission from HT Kannada....