ಭಾರತ, ಏಪ್ರಿಲ್ 23 -- ಇತ್ತೀಚಿನ ದಿನಗಳಲ್ಲಿ ನವೀಕರಿಸಲಾಗದ ಇಂಧನಗಳ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ತೈಲಗಳ ಬೆಲೆ ದುಬಾರಿಯಾಗಿರುವುದರಿಂದ ಅದರ ಬಗ್ಗೆಯೂ ಚಿಂತಿಸುವಂತಾಗಿದೆ. ಕಾರಣ ದ್ವಿಚಕ್ರ ವಾಹನಗಳಿಂದ ಹಿಡಿದು ಆಗಸದಲ್ಲಿ ಹಾರಾಡುವ ವಿಮಾನಗಳವರೆಗೆ ಇದೇ ಇಂಧನಗಳನ್ನು ಬಳಸಲಾಗುತ್ತಿದೆ. ಇಂಧನಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಯಾರಾದರೂ ಉದ್ದೇಶಪೂರ್ವಕವಾಗಿ ಇಂಧನವನ್ನು ನಷ್ಟ ಮಾಡಿದರೆ ಹೇಗೆನಿಸುತ್ತದೆ? ಹಾಗೆ ಮಾಡಲು ಕಾರಣವೇನು ಎಂಬ ಕುತೂಹಲ ಹೆಚ್ಚುತ್ತದೆ ಅಲ್ಲವೇ?.

ವಿಮಾನದಲ್ಲಿ ಹೆಚ್ಚುವರಿ ಇಂಧನವನ್ನು ಹೊರ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಪೈಲಟ್‌ಗಳು ಉದ್ದೇಶಪೂರ್ವಕವಾಗಿ ಲ್ಯಾಂಡ್‌ ಆಗುವ ಮೊದಲು ವಿಮಾನದಿಂದ ಇಂಧನವನ್ನು ಹೊರ ಹಾಕುತ್ತಾರೆ. ಈ ರೀತಿ ಗಾಳಿಯಲ್ಲಿಯೇ ಇಂಧನ ಹೊರಹಾಕಲು ಕಾರಣವೇನು? ಬಾಹ್ಯಾಕಾಶ ವಿಜ್ಞಾನದಲ್ಲಿ ಇಂಧನದ ಕಾಳಜಿಯಿಲ್ಲವೇ? ಇದರಲ್ಲಿ ಮೇಲ್ನೋಟಕ್ಕೆ ಇಂಧನಗಳನ್ನು ಅನಗತ್ಯವಾಗಿ ನಾಶಮಾಡಲಾಗುತ್ತಿದೆ ಎನ್ನಿಸಿದರೂ, ಈ ರೀತಿ ಮಾಡುವುದು ಸುರಕ್ಷಿತ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನ...