Bengaluru, ಮಾರ್ಚ್ 11 -- ಸೆಕೆ ಶುರುವಾದರೆ ಸಾಕು ರಾತ್ರಿ ಮಿಕ್ಕ ಆಹಾರಗಳಿಂದ ಹಿಡಿದು ದೋಸೆ ಹಿಟ್ಟು, ತಂಪು ಪಾನೀಯ, ನೀರು ಎಲ್ಲವೂ ಮನೆಯ ರೆಫ್ರಿಜರೇಟರ್‌‌‌‌ನಲ್ಲಿ ಜಾಗ ಪಡೆಯುತ್ತವೆ. ಆದರೆ ಈ ಫ್ರಿಡ್ಜ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮಾತ್ರ ಕಷ್ಟದ ಕೆಲಸವೇ ಸರಿ. ಹಾಗಂತ ಸ್ವಚ್ಛಗೊಳಿಸದೆ ಹಾಗೆ ಬಿಟ್ಟರೆ ನಮ್ಮ ಆರೋಗ್ಯವೂ ಕೆಡಬಹುದು. ಆಹಾರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು, ವಾಸನೆಯನ್ನು ತಡೆಗಟ್ಟಲು ಮತ್ತು ಇಂಧನ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ರೆಫ್ರಿಜರೇಟರ್ ಅನ್ನು ಸ್ವಚ್ಛವಾಗಿಡುವುದು ಅತ್ಯಗತ್ಯ. ಕಠಿಣ ರಾಸಾಯನಿಕಗಳನ್ನು ಬಳಸುವ ಬದಲು, ಪರಿಸರ ಸ್ನೇಹಿ ಶುಚಿಗೊಳಿಸುವ ವಿಧಾನಗಳು ನಿಮ್ಮ ಮನೆಯಲ್ಲಿರುವ ಫ್ರಿಜ್ ಅನ್ನು ತಾಜಾ ಆಗಿ ಇರಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಮನೆಯ ಫ್ರಿಡ್ಜ್ ಅನ್ನು ಸ್ವಚ್ಚಗೊಳಿಸುವ ಮುನ್ನ ಈ ಮಾಹಿತಿಯನ್ನು ತಿಳಿದುಕೊಳ್ಳಿ.

ಫ್ರಿಡ್ಜ್ ಸ್ವಚ್ಛಗೊಳಿಸುವ ಮೊದಲು ಕೆಲವೊಂದು ಅಂಶಗಳನ್ನು ಗಮನಿಸಿಕೊಳ್ಳುವುದು ಅಗತ್ಯ. ಫ್ರಿಡ್ಜ್‌ನ ಒಳಭಾಗವನ್ನು ಮ...