Bengaluru, ಮಾರ್ಚ್ 6 -- Friday OTT Releases: ಈ ಶುಕ್ರವಾರ ಒಟಿಟಿಗೆ ಯಾವೆಲ್ಲ ಸಿನಿಮಾ ಅಥವಾ ವೆಬ್‌ ಸರಣಿಗಳು ಬಿಡುಗಡೆಯಾಗಲಿದೆ ಎಂದು ಸಾಕಷ್ಟು ಜನರು ಕುತೂಹಲದಿಂದ ಕಾಯುತ್ತಿರಬಹುದು. ಈ ವಾರದ ನಡುವೆ ಹಲವು ಹೊಸ ಸಿನಿಮಾಗಳು ಒಟಿಟಿಗೆ ಬಂದಿವೆ. ಮಾರ್ಚ್‌ 7ರಂದು ಕೂಡ ಐದು ಹೊಸ ಸಿನಿಮಾ, ವೆಬ್‌ ಸರಣಿಗಳು ರಿಲೀಸ್‌ ಆಗಲಿವೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಸೊನಿಲಿವ್‌ ಮುಂತಾದ ಒಟಿಟಿಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಲ್ಲಿ ರೇಖಾಚಿತ್ರಂ ಇತ್ಯಾದಿಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿವೆ.

ವಿವಿಧ ವರದಿಗಳ ಪ್ರಕಾರ ಈ ವಾರ ಮಾರ್ಚ್‌ 7ರಂದು ರೇಖಾಚಿತ್ರಂ, ವೆನ್‌ ಲೈಫ್‌ ಗೀವ್ಸ್‌ ಯು ಟ್ಯಾಂಗರಿಂಗ್ಸ್‌, ದುಫಾಯಿಯಾ, ನಾದಾನಿಯನ್, ದಿ ವೇಕಿಂಗ್‌ ಆಫ್‌ ಎ ನೇಷನ್‌ಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ರೇಖಾ ಚಿತ್ರಂ ಮತ್ತು ದಿ ವೇಕಿಂಗ್‌ ಆಫ್‌ ಎ ನೇಷನ್‌ ಸಿನಿಮಾಗಳು ಸೋನಿ ಲಿವ್‌ನಲ್ಲಿ ಬಿಡುಗಡೆಯಾಗಲಿದೆ. ದುಫಾಯಿಯಾ ವೆಬ್‌ಸರಣಿಯು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ರಿಲೀಸ್‌ ಆಗಲಿದೆ. ವೆನ್‌ ಲೈಫ್‌ ...