Haryana, ಫೆಬ್ರವರಿ 23 -- ಚಂಡೀಗಢ: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಿಸಿ ಕಳೆದ ಚುನಾವಣೆಯಲ್ಲಿ ಗೆದ್ದು ನಂತರ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದೇ ಮಾದರಿಯಲ್ಲಿ ಉಚಿತ ಬಸ್‌ ಪ್ರಯಾಣದ ಯೋಜನೆಯನ್ನು ಹರಿಯಾಣದ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ. ಶುಕ್ರವಾರ ಬಜೆಟ್‌ ಮಂಡಿಸಿದ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರು ಉಚಿತ ಬಸ್‌ ಪ್ರಯಾಣದ ಘೋಷಣೆಯನ್ನು ಮಾಡಿದರು.

ಆದರೆ ಹರಿಯಾಣ ರಾಜ್ಯ ಸರ್ಕಾರ ಘೋಷಿಸಿರುವ ಉಚಿತ ಬಸ್‌ ಪ್ರಯಾಣ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲರೂ ಇದನ್ನು ಬಳಸಬಹುದು. ಬಹುತೇಕ ಬರುವ ಏಪ್ರಿಲ್‌ 1 ರಿಂದ ಇದು ಜಾರಿಯಾಗಲಿದೆ.

ಇದನ್ನೂ ಓದಿರಿ:Bhagya Lakshmi Scheme: ಬಿಎಸ್‌ವೈ ಆರಂಭಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ನಿಲ್ಲುತ್ತಾ? ಇಲ್ಲ ಎಂದರು ಸಚಿವರು

ಆದರೆ ಇದನ್ನು ಬಳಸುವವರು ಆದಾಯ ಮಿತಿ 1 ಲಕ್ಷದ ಒಳಗೆ ಇರಬೇಕು. ಈ ಆದಾಯ ಮಿತಿ ಹೊಂದಿರುವವರು ಹರಿಯಾಣ ಸಾರಿಗೆ ಬಸ್‌ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಒಂದು ಸಾವಿರ ಕಿ.ಮಿ.ವ...