Haveri, ಮಾರ್ಚ್ 16 -- Forest News: ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಡಾನೆಗಳ ಉಪಟಳದಿಂದ ಜನತೆ ಹೈರಾಣಾಗಿದ್ದು. ಅರಣ್ಯ ಇಲಾಖೆ ವಿರುದ್ದ ಆಕ್ರೋಶವನ್ನು ಹೊರ ಹಾಕುತ್ತಲೇ ಇದ್ದಾರೆ. ಇದರ ನಡುವೆ ಉತ್ತರ ಕರ್ನಾಟಕದ ಯಾಲಕ್ಕಿ ನಾಡು ಎಂದೇ ಹೆಸರಾಗಿರುವ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಸಮೀಪದ ಹುಣಸಿಕಟ್ಟೆ ಅರಣ್ಯದಲ್ಲಿ ಎರಡು ಆನೆಗಳು ಸಂಚರಿಸಿರುವುದು ಕಂಡುಬಂದಿದೆ. ಕಳೆದು ರಾತ್ರಿಯಿಂದ ಮುಡಕೇರಿ, ಮಡಕಿನಕೊಪ್ಪ ಸೇರಿದಂತೆ ವಿವಿಧೆಡೆ ಸಂಚರಿಸಿರುವ ಮಾಹಿತಿ ಲಭ್ಯ ಆಗಿದೆ. ತಂಡದಲ್ಲಿ ಒಟ್ಟು ಎರಡು ಗಂಡಾನೆಗಳಿವೆ. ಅದರಲ್ಲಿ ಒಂದು ದೊಡ್ಡ ಹಾಗೂ ಸಣ್ಣ ಆನೆ ಇದ್ದವೆ ಎಂದು ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ. ಈ ಎರಡು ಆನೆಗಳು ನಾಗನೂರಕೇರಿಯಲ್ಲಿ ನೀರು ಕುಡಿದು ಸಿದ್ದನಗುಡ್ಡದ ಬಳಿ ತೆರಳಿವೆ ಎಂದು ತಿಳಿದುಬಂದಿದೆ.

ನಮಗೆ ಇದ್ದ ಮಾಹಿತಿ ಪ್ರಕಾರ ಎರಡು ಗಂಡು ಆನೆಗಳು ನಾಗನೂರು ಕೆರೆಯಲ್ಲಿ ಕಂಡ ಬಗ್ಗೆ ಮಾಹಿತಿ ಬಂದ ಕೂಡಲೇ ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಾನಿಕವಾಗಿ ಪರಿಶೀಲನೆ ಮಾಡಲಾಗಿ ಸಿದ್ದನಗುಡ್ಡ ಅರಣ್...