Hassan, ಮಾರ್ಚ್ 14 -- Forest News: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಎರಡೇ ತಿಂಗಳ ಅಂತರದಲ್ಲಿ ನಾಲ್ಕನೇ ಆನೆ ದಾಳಿ ಪ್ರಕರಣ ನಡೆದಿದ್ದು. ಮಹಿಳೆಯೊಬ್ಬರು ಶುಕ್ರವಾರ ಜೀವ ಕಳೆದುಕೊಂಡಿದ್ದಾರೆ. ಬೇಲೂರು ತಾಲ್ಲೂಕಿನ ಕೋಗೋಡು ಬೊಮ್ಮನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಸುಶೀಲಮ್ಮ ಎಂಬುವವರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಕೋಗೋಡು ಗ್ರಾಮಸ್ಥರು ಮಹಿಳೆ ಶವವನ್ನು ಇರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ರಸ್ತೆ ತಡೆ ಮಾಡಿ ಬೆಂಕಿಯನ್ನೂ ಹಚ್ಚಿ ಆಕ್ರೋಶ ಹೊರ ಹಾಕಿದರು. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯು ಕೂಡಲೇ ಸೆರೆ ಹಿಡಿಯಬೇಕು. ಆನೆ ಭಯದಿಂದ ಜನರನ್ನು ಮುಕ್ತಗೊಳಿಸಬೇಕು ಎನ್ನುವ ಒತ್ತಾಯದೊಂದಿಗೆ ಪ್ರತಿಭಟನೆ ನಡೆದಿದೆ.

ಮೂಡಿಗೆರೆ- ಬೇಲೂರು ರಸ್ತೆಯಲ್ಲಿರುವ ಕೋಗೋಡು ಬೊಮ್ಮನಹಳ್ಳಿ ಗ್ರಾಮದ ಬಳಿ ಮಧ್ಯಾಹ್ನದ ಸಮಯದಲ್ಲಿ ಕಾಫಿ ತೋಟದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸುಶೀಲಮ್ಮ ಅವರ ಮೇಲೆ ಏಕಾಏಕಿ...