ಭಾರತ, ಏಪ್ರಿಲ್ 11 -- Forest News: ನಾಗರಹೊಳೆ ಅರಣ್ಯದಲ್ಲಿ ಸಾಕಾನೆ ಮಾವುತರಿಬ್ಬರು ಸ್ಥಳೀಯರೊಂದಿಗೆ ಸೇರಿಕೊಂಡು ಕಾಡು ಹಂದಿ ಬೇಟೆಯಾಡಿ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಆನೆ ಮಾವುತರ ವಿರುದ್ದ ಪ್ರಕರಣ ದಾಖಲಾಗಿದ್ದು, ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಅರಣ್ಯ ಇಲಾಖೆಯಲ್ಲಿ ಸೇವೆ ಮಾಡಿಕೊಂಡೇ ಕಾಡು ಪ್ರಾಣಿ ಬೇಟೆಯಾಡಿ ಸಿಕ್ಕಿಬಿದ್ದಿರುವ ಇಬ್ಬರು ಮಾವುತರನ್ನು ಅಮಾನತುಪಡಿಸಲಾಗಿದೆ. ಇಬ್ಬರು ಮಾವುತರ ವಿರುದ್ದ ವಿಚಾರಣೆ ನಡೆಯುತ್ತಿದ್ದು ಬಂಧಿಸಲೂ ಅರಣ್ಯ ಇಲಾಖೆಯವರು ಸಿದ್ದತೆ ಮಾಡಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಾಗರಹೊಳೆಯಲ್ಲಿ ಕೆಲವು ದಿನಗಳಿಂದ ಈ ರೀತಿ ಪ್ರಾಣಿ ಬೇಟೆಯಂತಹ ಚಟುವಟಿಕೆಗಳು ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗುತ್ತಿದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.

Published by HT Digital Content Services with permission from HT Kannada....