Mysuru, ಮಾರ್ಚ್ 3 -- ಕರ್ತವ್ಯದಲ್ಲಿದ್ದಾಗ ಕಾಡಾನೆ ದಾಳಿಯಿಂದ ಮೃತಪಟ್ಟ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಅವರ ಪ್ರತಿಮೆಯನ್ನು ನಾಗರಹೊಳೆ ಬಳ್ಳೆ ಅರಣ್ಯ ವಲಯದಲ್ಲಿ ಸೋಮವಾರ ಅನಾವರಣಗೊಳಿಸಲಾಯಿತು.

ವಿಶ್ವ ವನ್ಯಜೀವಿ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಡಿಸಿಎಫ್ ಪಿ.ಎ.ಸೀಮಾ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಮೃತ ಡಿಸಿಎಫ್ ಮಣಿಕಂಠನ್ ಗೌರವಾರ್ಥ ಮೌನ ಆಚರಿಸಲಾಯಿತು.ಮಣಿಕಂಠನ್‌ ನಿಧನರಾಗಿ ಏಳು ವರ್ಷವಾಗಿದೆ. ಸಮಾರಂಭದಲ್ಲಿ ಎಸಿಎಫ್ ಗಳಾದ ಎನ್.ಲಕ್ಷ್ಮಿಕಾಂತ್, ಎಸ್.ಡಿ.ಮಧು, ಆರ್‌ಎಫ್‌ಇ ಎಸ್.ಎಸ್.ಸಿದ್ಧರಾಜು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ವನ್ಯಜೀವಿ ದಿನದಂದೇ ನಾಗರಹೊಳೆಯ ಡಿಬಿಕುಪ್ಪೆ ವಲಯ ವ್ಯಾಪ್ತಿಯ ಬಳ್ಳೆ ಭಾಗದಲ್ಲಿ ಕ್ಷೇತ್ರ ಭೇಟಿ ವೇಳೆ ಏಕಾಏಕಿ ಆನೆ ದಾಳಿ ಮಾಡಿದ್ದಾಗ ಮಣಿಕಂಠನ್‌ ನಿಧನರಾಗಿದ್ದರು.

ಸೇವೆಯಲ್ಲಿದ್ದಾಗಲೇ ಐಎಫ್‌ ಎಸ್‌ ಹಂತದ ಅಧಿಕಾರಿಗಳು ವನ್ಯಜೀವಿಗಳ ದಾಳಿ ಬಲಿಯಾಗಿರುವುದು ಅತೀ ವಿರಳ. ಈ ರೀತಿ ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿ ಒಳ್ಳೆಯ ಹೆಸರು ಮಾಡಿದ್ದ ಮಣಿಕಂಠ...