ಭಾರತ, ಫೆಬ್ರವರಿ 17 -- Forest News: ಕರ್ನಾಟಕದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಹಲವು ಜಿಲ್ಲೆಗಳಲ್ಲಿ ಕಾಡಾನೆಗಳ ಹಿಂಡು ನುಗ್ಗಿ ದಾಂದಲೆ ಮಾಡುತ್ತಿವೆ. ಕಳೆದ ವಾರ ಒಂದೇ ದಿನ ಕಾಡಾನೆ ದಾಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮೂವರು ಮೃತಪಟ್ಟ ನಂತರ ಕರ್ನಾಟಕ ಅರಣ್ಯ ಇಲಾಖೆಯೂ ಆನೆಗಳ ನಿರ್ವಹಣೆಗೆ ನಿಖರ ಹಾಗೂ ಸಂಘಟಿತ ಚಟುವಟಿಕೆ ರೂಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. ಕಾಡಾನೆಗಳ ಸಮಸ್ಯೆ ಇರುವ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಸಕಾಲಿಕವಾಗಿ ಆನೆಗಳು ಸಂಚರಿಸಬಹುದಾದ ಮಾಹಿತಿಯನ್ನು ಒದಗಿಸಿ ಅದು ಜನರಿಗೆ ಕೂಡಲೇ ತಲುಪುವಂತೆ ಮಾಡಬೇಕು. ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಡಿಸಿಎಫ್‌ ಮೂಲಕ ಮಾಹಿತಿ ಒದಗಿಸಿ ನಿರ್ವಹಣೆಗೆ ಸಹಕಾರ ಪಡೆಯಬೇಕು ಎಂದು ಸೂಚಿಸಲಾಗಿದೆ.

ಮೈಸೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮೂವರು ಮೃತಪಟ್ಟು ಅಲ್ಲಲ್ಲಿ ಆನೆಗಳು ದಾಳಿ ಮಾಡಿರುವ ಪ್ರಕರಣಗಳು ವರದಿಯಾದ ಬೆನ್ನಲ್...