Bangalore, ಫೆಬ್ರವರಿ 26 -- Forest News: ಕರ್ನಾಟಕದಲ್ಲಿ ಸರಿಯಾಗಿ ಹನ್ನೆರಡು ವರ್ಷದ ಹಿಂದೆ 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ ಮೊದಲ ಬಜೆಟ್‌ನಲ್ಲೇ ಆನೆ ಉಪಟಳ ತಡೆಗೆ ರೈಲ್ವೆ ಕಂಬಿ ಅಳವಡಿಸುವ ಯೋಜನೆಗೆ ಸುಮಾರು 250 ಕೋಟಿ ಪ್ರಕಟಿಸಿದರು. ಆ ವರ್ಷ 50 ಕೋಟಿ ರೂ. ಬಿಡುಗಡೆಯಾಗಿ ಕೆಲಸವೂ ಶುರುವಾಯಿತು. ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ರಾಮನಗರ ಸಹಿತ ಆನೆ ಸಮಸ್ಯೆ ಅಧಿಕವಾಗಿರುವ ಹಲವು ಕಡೆ ರೈಲ್ವೆ ಹಳಿ ತಡೆಗೋಡೆ ನಿರ್ಮಿಸುವ ಯೋಜನೆ ರೂಪಿಸಿ ಕೆಲವು ಭಾಗದಲ್ಲಿ ಅನುಷ್ಠಾನವೂ ಆಯಿತು. ಆದರೆ ಸೂಕ್ತ ಕಾಲಕ್ಕೆ ಅನುದಾನ ಸಿಗದೇ ರೈಲ್ವೆ ಕಂಬಿ ಅಳವಡಿಸುವ ಯೋಜನೆ ಕಾಲಮಿತಿಯೊಳಗೆ ಮುಗಿಯಲಿಲ್ಲ. ಆನೆಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡಿ ಜನರನ್ನು ಸಾಯಿಸುವುದು ತಪ್ಪುತ್ತಿಲ್ಲ. ಫೆಬ್ರವರಿ ಒಂದೇ ತಿಂಗಳಲ್ಲಿ ಕಾಡಾನೆ ದಾಳಿಗೆ ಐದಾರು ಮಂದಿ ಪ್ರಾಣ ಕಳೆದುಕೊಂಡ ನಂತರ ಕರ್ನಾಟಕ ಇಲಾಖೆ ರೈಲ್ವೆ ಕಂಬಿ ಯೋಜನೆಗೆ ತ್ವರಿತವಾಗಿ ಜಾರಿಗೊಳಿಸುವುದಾಗಿ ಹೇಳುತ್ತಿದೆ.

ರಾಜ್ಯ ಸರ್ಕಾರ ವನ್ಯಜೀವಿ- ...