Hassan,kolar, ಫೆಬ್ರವರಿ 25 -- ಬೆಂಗಳೂರು: ಒಂದೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿರುವ ಘಟನೆಗಳು ಕರ್ನಾಟಕದ ವಿವಿಧ ಭಾಗದಲ್ಲಿ ವರದಿಯಾಗಿವೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಘಟನೆ ನಡೆದ ಹನ್ನೆರಡು ಗಂಟೆಯಲ್ಲೇ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕರ್ನಾಟಕ ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಂಚಿನ ಗ್ರಾಮದಲ್ಲಿ ಆನೆ ತುಳಿತ ಪ್ರಕರಣ ವರದಿಯಾಗಿದೆ. ಮೊದಲ ಪ್ರಕರಣದಲ್ಲಿ ಯುವಕ ಬಲಿಯಾದರೆ, ಎರಡನೇ ಪ್ರಕರಣದಲ್ಲಿ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಡಾನೆ ಹಾವಳಿ ಅಲ್ಲಲ್ಲಿ ವರದಿಯಾಗುತ್ತಿದೆ. ಆನೆಗಳನ್ನು ಸೆರೆ ಹಿಡಿದು ಉಪಟಳ ಕಡಿಮೆ ಮಾಡುವಂತೆ ಕೋರುತ್ತಿದ್ದರೂ ಕ್ರಮ ಆಗುತ್ತಿಲ್ಲ ಎನ್ನುವ ಆಕ್ರೋಶ ಅರಣ್ಯ ಇಲಾಖೆ ವಿರುದ್ದ ಕೇಳಿ ಬಂದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಅರಣ್ಯದಂಚಿನ ಗ್ರಾಮವಾದ ಕಾಮಸಮುದ್ರ ಹೋಬಳಿ ಸಾಕರಸನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಂಜುಳಾ ಎಂಬುವ ಮಹಿಳೆ ಜೀವ ಕಳೆದುಕೊಂಡಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಸಾಕರಸನ...