ಭಾರತ, ಜನವರಿ 27 -- : ಬೆಟರ್ ಮ್ಯಾನ್ ಹೊಸ ವರ್ಷದ ಅತಿದೊಡ್ಡ ಫ್ಲಾಪ್ ಚಲನಚಿತ್ರವಾಗಿದೆ. ಮೈಕೆಲ್ ಗ್ರೇಸಿ ನಿರ್ದೇಶನದ ಈ ಚಿತ್ರವನ್ನು 110 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಯಿತು ಆದರೆ ಎಷ್ಟು ಹಣ ಹಾಕಿ ಸಿನಿಮಾ ಮಾಡಿದ್ದರೋ ಅದರ ಕಾಲು ಭಾಗವೂ ಹಿಂದಿರುಗಿ ಬರದ ರೀತಿಯಲ್ಲಿ ಸಿನಿಮಾ ಕೈಕೊಟ್ಟಿದೆ. ಬಹಳ ನಿರೀಕ್ಷೆಯಿಂದ ಈ ಸಿನಿಮಾವನ್ನು ಜನರು ಇಷ್ಟಪಡಬಹುದು ಎಂಬ ಭರವಸೆಯಲ್ಲೇ ನಿರ್ಮಾಣ ಮಾಡಿ ಜನರೆದುರು ತರಲಾಯಿತು, ಆದರೆ ಜನರು ಈ ಸಿನಿಮಾವನ್ನು ಇಷ್ಟಪಡಲಿಲ್ಲ. ಗಲ್ಲಾಪಟೆಟ್ಟಿಗೆಯಲ್ಲಿ ಕೇವಲ 130 ಕೋಟಿ ಮಾತ್ರ ಸಂಪಾದನೆ ಮಾಡಿತು. 800 ಕೋಟಿ ನಷ್ಟವನ್ನು ಈ ಸಿನಿಮಾ ಅನುಭವಿಸಿತು. ಈ ಚಿತ್ರವು ನಂಬರ್ ಒನ್ ಸಂಗೀತ ಕಲಾವಿದನ ಜೀವನಚರಿತ್ರೆಯಾಗಿದೆ.

ವರ್ಷಗಳ ಹಿಂದೆ ಒಂದೇ ದಿನದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ ಬ್ರಿಟಿಷ್ ಗಾಯಕ ರಾಬಿ ವಿಲಿಯಮ್ಸ್ ಅವರ ಜೀವನವನ್ನು ಆಧರಿಸಿದ ಚಿತ್ರ ಬೆಟರ್ ಮ್ಯಾನ್. ಅವರ ಎಲ್ಲಾ ಆಲ್ಬಂಗಳು ನಂಬರ್ 1 ಸ್ಥಾನವನ್ನು ಪಡೆದಿವೆ. ಅವರ ಜೀವ...