Bengaluru, ಫೆಬ್ರವರಿ 3 -- ಜನರು ತೂಕ ಕಳೆದುಕೊಳ್ಳಬೇಕು, ಹೊಟ್ಟೆ ಸಣ್ಣದಾಗಬೇಕು ಎಂದು ಹಲವು ಕಸರತ್ತು ಮಾಡುತ್ತಾರೆ. ಅದರಲ್ಲೂ ಜಿಮ್‌ಗೆ ಹೋಗುವುದು, ವರ್ಕೌಟ್ ಮಾಡುವುದು, ಡಯೆಟ್ ಫುಡ್ ಸೇವನೆ ಎಂದು ಹಲವು ರೀತಿಯಲ್ಲಿ ಪ್ರಯತ್ನ ಕೈಗೊಳ್ಳುತ್ತಾರೆ. ಹೇಗಾದರೂ ಮಾಡಿ, ತೂಕ ಕಡಿಮೆ ಮಾಡಿಕೊಂಡು, ಆಕರ್ಷಕ ದೇಹಾಕೃತಿ ಹೊಂದಬೇಕು ಎನ್ನುವುದು ಅವರ ಆಸೆಯಾಗಿರುತ್ತದೆ. ಆದರೆ ಕೆಲವೊಮ್ಮೆ ಸರಳ ಟಿಪ್ಸ್ ಪಾಲಿಸಿದರೆ ಸಾಕು, ನೀವು ಮನೆಯಲ್ಲೇ ಅವುಗಳನ್ನು ಟ್ರೈ ಮಾಡಿ, ತೂಕ ಕಡಿಮೆ ಮಾಡಬಹುದು. ಫಿಟ್ಮೆಸ್ ಟ್ರೈನರ್ ನೇಹಾ ಅವರ ಪ್ರಕಾರ, ಕೆಲವು ಟಿಪ್ಸ್ ಮತ್ತು ಡಯೆಟ್, ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಂಡರೆ, ಚಪ್ಪಟೆಯಾದ ಹೊಟ್ಟೆ ನಮ್ಮದಾಗಬಹುದು.

ಹೊಟ್ಟೆಯಲ್ಲಿ ಶೇಖರವಾಗಿರುವ ಬೊಜ್ಜು ಕಡಿಮೆ ಮಾಡಲು ಈ ಸರಳ ಟಿಪ್ಸ್ ಪಾಲಿಸಿ, ಮೂರು ಹೊತ್ತು ಭರ್ಜರಿಯಾಗಿ ತಿನ್ನುವ ಬದಲು, ದಿನದಲ್ಲಿ ನಾಲ್ಕು ಹೊತ್ತು ಸರಳ ಮತ್ತು ಅತಿ ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವಿಸಿ. ಇದರಿಂದಾಗಿ ನೀವು ಮಿತಿಗಿಂತ ಹೆಚ್ಚಿನ ಆಹಾರ ಸೇವಿಸುವುದು ತಪ್ಪುತ್ತದೆ...