Bangalore, ಮಾರ್ಚ್ 13 -- Fish Rate Hike: ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಕಾಡುತ್ತಿದೆ. ನೆರೆಯ ಆಂಧ್ರಪ್ರದೇಶಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರ ತಾಂಡವವಾಡುತ್ತಿದೆ. ನಿಧಾನವಾಗಿ ಹಕ್ಕಿ ಜ್ವರ ಕರ್ನಾಟಕಕ್ಕೂ ಕಾಲಿರಿಸಿದೆ. ಯಾವಾಗ ಹಕ್ಕಿ ಜ್ವರದ ಭೀತಿ ಕಾಡಲು ಆರಂಭವಾದ ದಿನದಿಂದಲೇ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೋಟೆಲ್‌ ಗಳಷ್ಟೇ ಮನೆಗಳಲ್ಲೂ ಚಿಕನ್‌ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದೆ. ಅತ್ತ ಕೋಳಿ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಇತ್ತ ಮಟನ್ ಗೆ ಬೇಡಿಕೆ ಹೆಚ್ಚಳವಾಗಿದೆ. ಕುರಿ- ಮೇಕೆ ಮಾಂಸದ ಬೆಲೆ 800 ರೂಪಾಯಿ ಗಡಿ ದಾಟಿದ್ದು, ತುಸು ದುಬಾರಿಯಾಗಿದೆ. ಕೋಳಿ‌, ಮಟನ್ ಸಹವಾಸವೇ ಬೇಡ ಎಂದು ಮೀನಿನತ್ತ ಜನ ವಾಲತೊಡಗಿದರು. ಇದೀಗ ಮೀನು ಪ್ರಿಯರಿಗೂ ಶಾಕ್‌ ಕಾದಿದ್ದು, ಮೀನಿನ ಬೆಲೆ ದಿಢೀರ್‌ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇ.30ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದುಮೊದಲ ಕಾರಣವಾದರೆ ಮೀನುಗಾರಿಕೆ ಕುಸಿತ ಕಂಡಿರುವುದು ಎರಡನೆಯ ಕಾರಣವಾಗಿದೆ. ಬೇಡಿಕೆಗೆ ತಕ್ಕಷ್...