ಭಾರತ, ಏಪ್ರಿಲ್ 22 -- ಮಾಂಸಾಹಾರ ಭೋಜನ ಪ್ರಿಯರಿಗೆ ಚಿಕನ್ ಸಾರು, ಮಟನ್ ಕೈಮಾ, ಚಿಲ್ಲಿ ಚಿಕನ್ ಜೊತೆ ಸವಿಯಲು ಮೀನು ಫ್ರೈ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಮೀನು ಅಂದಾಕ್ಷಣ ನೆನಪಾಗುವುದು ದೇಶದ ಕರಾವಳಿ ಭಾಗಗಳು. ಉತ್ತರದಿಂದ ದಕ್ಷಿಣದವರೆಗೆ ನಾನಾ ಶೈಲಿಯ ಮೀನು ರೆಸಿಪಿಗಳ ಬಗ್ಗೆ ನೀವು ಕೇಳಿರಬಹುದು. ರಾಜ್ಯದ ಕರಾವಳಿ ಭಾಗದ ಬೂತಾಯಿ/ಬಂಗುಡೆ ಪುಳಿಮುಂಚಿ, ಗೋವಾದ ಮೀನು ಸಾರು, ಚೆಟ್ಟಿನಾಡ್ ಫಿಶ್ ಕರಿ, ಅಮೃತಸರಿ ಮೀನು ಪದಾರ್ಥ ಸೇರಿದಂತೆ ಹಲವಾರು ಬಗೆಯ ಖಾದ್ಯಗಳಿವೆ. ಸಮುದ್ರದ ಮೀನುಗಳು ತಿನ್ನಲು ಬಹಳ ರುಚಿಕರ. ಹೀಗಾಗಿ ಬಹುತೇಕರು ಮೀನಿನ ವಿವಿಧ ಬಗೆಯ ಖಾದ್ಯಗಳನ್ನು ಇಷ್ಟಪಟ್ಟು ಸವಿಯುತ್ತಾರೆ.

ನೀವು ಮೀನನ್ನು ಖರೀದಿಸಿ ತಂದಿರಬಹುದು ಅಥವಾ ಗಾಳ ಹಾಕಿ ಮೀನು ಹಿಡಿದಿರಬಹುದು. ಆದರೆ, ಅದರ ಖಾದ್ಯ ತಯಾರಿಸುವ ಮುನ್ನ ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ನೀವು ಮೀನನ್ನು ಎಷ್ಟು ರುಚಿಕರವಾಗಿ ತಯಾರಿಸುತ್ತಿರೋ ಅದಕ್ಕಿಂತ ಮುಖ್ಯವಾಗಿ ಅವುಗಳನ್ನು ಸ್ವಚ್ಫಗೊಳಿಸಬೇಕು. ಇಲ್ಲದಿದ್ದರೆ ಮೀನಿನ ಪದಾರ್ಥ ಕಹಿಯಾಗಿ ಬದಲಾಗ...