ಭಾರತ, ಫೆಬ್ರವರಿ 24 -- ಭುವನೇಶ್ವರ: ಸೋಮವಾರ (ಫೆ 23) ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25 ಪಂದ್ಯದಲ್ಲಿ ಸ್ಯಾಮ್ ವಾರ್ಡ್ ಗಳಿಸಿದ ಎರಡು ಗೋಲುಗಳ ಗೋಲುಗಳಿಂದ ಇಂಗ್ಲೆಂಡ್ ತಂಡವು ಭಾರತೀಯ ಪುರುಷರ ಹಾಕಿ ತಂಡದ ವಿರುದ್ಧ 3-2 ಅಂತರದ ರೋಮಾಂಚಕ ಜಯ ಸಾಧಿಸಿತು. ಜೇಮ್ಸ್ ಪೇಟನ್ ಅವರ ಆರಂಭಿಕ (15ನೇ ನಿಮಿಷ) ನಂತರ ವಾರ್ಡ್ ಎರಡು ಬಾರಿ (19ನೇ ನಿ ಮತ್ತು 29ನೇ ನಿ) ಗೋಲು ಗಳಿಸುವ ಮೂಲಕ ಈ ಆವೃತ್ತಿಯಲ್ಲಿ ಗೋಲುಗಳ ಸಂಖ್ಯೆಯನ್ನು 11ಕ್ಕೆ ಏರಿಸಿಕೊಂಡರು. ಅಭಿಷೇಕ್ (18ನೇ ನಿ) ಮತ್ತು ಸುಖ್‌ಜೀತ್ ಸಿಂಗ್ (39ನೇ ನಿ) ಅವರು ಗಳಿಸಿದರು. ಆದರೆ ಕೊನೆಯ ಹಂತದಲ್ಲಿ ಗೋಲು ಗಳಿಸಲು ವಿಫಲವಾದ ಹಿನ್ನೆಲೆ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಮಹಿಳೆಯರ ಪಂದ್ಯದಲ್ಲೂ ಭಾರತ ತಂಡ ಸೋಲಿನ ರುಚಿ ಕಂಡಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎಫ್​ಐಹೆಚ್ ಹಾಕಿ ಪ್ರೊ ಲೀಗ್ 2024-25 ರಲ್ಲಿ ಭಾರತದ ಮಹಿಳಾ ಹಾಕಿ ತಂಡವು ತನ್ನ ಧೈರ್ಯಶಾಲಿ ಪ್ರಯತ್ನಗಳ ಹೊರತಾಗಿಯೂ ಹಾಲಿ ಚಾಂಪಿಯನ್ ನೆದರ...