ಭಾರತ, ನವೆಂಬರ್ 25 -- ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ವಿವಿಧ ದಾಖಲೆಗಳು ಹಾಗೂ ರೋಚಕ ಕಾದಾಟಗಳು ನಡೆಯುತ್ತಲೇ ಇವೆ. ಗುರುವಾರ ನಡೆದ ಪೋರ್ಚುಗಲ್‌ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಫುಟ್‌ಬಾಲ್ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಘಾನಾ ವಿರುದ್ಧ ಐತಿಹಾಸಿಕ ಪೆನಾಲ್ಟಿ ಕಿಕ್ ಗಳಿಸಿ ದಾಖಲೆ ಬರೆದಿದ್ದಾರೆ.

ರೊನಾಲ್ಡೊ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯ ಐದು ಆವೃತ್ತಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಪಂದ್ಯಗಳಲ್ಲಿ ಆಡಿದ ರೊನಾಲ್ಡೊ, ವಿಶ್ವಕಪ್‌ನಲ್ಲಿ ತಮ್ಮ ದೇಶದ ಪರ ಆಡಿದ 18ನೇ ಪಂದ್ಯದಲ್ಲಿ 8ನೇ ವಿಶ್ವಕಪ್ ಗೋಲನ್ನು ಗಳಿಸಿದ್ದಾರೆ.

ರೊನಾಲ್ಡೊ FIFA ವಿಶ್ವಕಪ್‌ನ 2006, 2010, 2014, 2018 ಮತ್ತು 2022ನೇ ಆವೃತ್ತಿಗಳಲ್ಲಿ ಗೋಲು ಗಳಿಸಿದ್ದಾರೆ. ಈ ಮೂಲಕ ಲಿಯೋನೆಲ್ ಮೆಸ್ಸಿ, ಪೀಲೆ, ಉವೆ ಸೀಲರ್ ಮತ್ತು ಮಿರೊಸ್ಲಾವ್ ಕ್ಲೋಸ್ ಅವರನ್ನು ಹಿಂದಿಕ್ಕಿ ಐದು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸ್ಕೋರ್ ಮಾಡಿದ ಮೊದಲ ಆಟಗಾರ ಎಂ...