ಭಾರತ, ನವೆಂಬರ್ 25 -- ಕತಾರ್‌: ಫಿಫಾ ವಿಶ್ವಕಪ್‌ನಲ್ಲಿ ನಿನ್ನೆ ನಡೆದ ಪಂದ್ಯಗಳಲ್ಲಿ ಗೋಲ್ ಮೆಷಿನ್ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್‌ ಗೆಲುವಿನ ಆರಂಭ ಪಡೆಯಿತು. ಮತ್ತೊಂದೆಡೆ ಬಲಿಷ್ಠ ಬ್ರೆಜಿಲ್‌ ತಂಡ ಕೂಡಾ ವಿಜಯದ ಅಭಿಯಾನ ಆರಂಭಿಸಿತು. ಇಂದು ಕೂಡಾ ಫಿಫಾ ವಿಶ್ವಕಪ್‌ನಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರಕಲಿದೆ. ನಿನ್ನೆಯಂತೆಯೇ ಒಟ್ಟು ನಾಲ್ಕು ಪಂದ್ಯಗಳು ಇಂದು ನಡೆಯಲಿವೆ.

ಅತಿಥೇಯ ಕತಾರ್ ಅಭಿಮಾನಿಗಳಿಗೆ ಇಂದು ಭರ್ಜರಿ ಮನರಂಜನೆ ಸಿಗಲಿದೆ. ಏಕೆಂದರೆ ಅತಿಥೇಯರ ತಂಡ ಕೂಡಾ ಇಂದಿನ ಪಂದ್ಯದಲ್ಲಿ ಆಡಲಿದೆ. ವಿಶ್ವಕಪ್ 2022ರ ಆರಂಭಿಕ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ ಬಳಿಕ, ಮಧ್ಯಪ್ರಾಚ್ಯ ರಾಷ್ಟ್ರವು ಇಂದಿನ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.

ನೆದರ್ಲ್ಯಾಂಡ್ಸ್, ಸೆನೆಗಲ್, ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಕೂಡಾ ಇಂದಿನ ಫಿಫಾ ವಿಶ್ವಕಪ್ ಗುಂಪು ಹಂತದ ಪಂದ್ಯಗಳಲ್ಲಿ ಭಾಗವಹಿಸಲಿವೆ. ಇಂದಿನ ನಾಲ್ಕು ಗುಂಪು ಹಂತದ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಕುರಿತ ವಿವರಗ...