ಭಾರತ, ನವೆಂಬರ್ 24 -- ಫುಟ್ಬಾಲ್ ವಿಶ್ವಕಪ್ ರಂಗೇರಿದೆ. ದಿನದಿಂದ ದಿನಕ್ಕೆ ಫಿಫಾ ವಿಶ್ವಕಪ್‌ನಲ್ಲಿ ರೋಚಕ-ರೋಮಾಂಚಕ ಪಂದ್ಯಗಳು ನಡೆಯುತ್ತಿದ್ದು, ಅಚ್ಚರಿಯ ಫಲಿತಾಂಶ ಹೊರಬೀಳುತ್ತಿವೆ. ನಿನ್ನೆ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಈಡನ್ ಹಜಾರ್ಡ್‌ ನೇತೃತ್ವದ ಬೆಲ್ಜಿಯಂ ತಂಡವು ಕೆನಡಾದ ವಿರುದ್ಧ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಅಲ್ ಜನೌಬ್ ಕ್ರೀಡಾಂಗಣದಲ್ಲಿ ತನ್ನ ಫಿಫಾ ವಿಶ್ವಕಪ್ 2022ರ ಪಂದ್ಯದಲ್ಲಿ ಗೆಲುವಿನ ಅಭಿಯಾನ ಆರಂಭಿಸಿತು.

ಇಂದಿನ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ ಕ್ಯಾಮರೂನ್ ಕಣಕ್ಕಿಳಿದರೆ, ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತನ್ನ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಘಾನಾವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ವಿಶ್ವಕಪ್‌ನ ಯಶಸ್ವಿ ತಂಡ ಬ್ರೆಜಿಲ್‌ ಸರ್ಬಿಯಾ ಸವಾಲನ್ನು ಎದುರಿಸಲಿದೆ.

ಪೋರ್ಚುಗಲ್ ಮತ್ತು ಘಾನಾ ಕೊನೆಯ ಬಾರಿಗೆ 2014ರ ಫಿಫಾ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಗೋಲ್ ಮೆಷಿನ್ ರೊನಾಲ್ಡೊ ಆ ಸಮಯದಲ್ಲಿ ಘಾನಾ ವಿರುದ್ಧದ 2-1 ಅಂತರದ ಗೆಲುವಿನಲ್ಲಿ...