ಭಾರತ, ಫೆಬ್ರವರಿ 13 -- ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ನೀಡಲಾಗುವ ಹಿರಿಯ ಮತ್ತು ಕಿರಿಯ ಫೆಲೋಶಿಪ್ ಗಾಗಿ ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಸಾಹಿತ್ಯ ಸಂಶೋಧನೆಗೆ 3/2 ಲಕ್ಷ ರೂಪಾಯಿ ಗೌರವಧನ ನೀಡುವ ಅಪರೂಪದ ಯೋಜನೆಯಾಗಿದೆ. ಆಸಕ್ತರು ಅರ್ಜಿ ನಮೂನೆಯನ್ನು ಪ್ರಾಧಿಕಾರದ ಜಾಲತಾಣ www.kuvempubhashabharathi,karanataka.gov.inದಿಂದ ಪಡೆದುಕೊಳ್ಳಬಹುದು ಎಂದು ಕುವೆಂಪು ಭಾಷಾಭಾರತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕುವೆಂಪು ಅವರ ಸಾಹಿತ್ಯ, ಕುವೆಂಪು ಅವರ ವಿಚಾರಗಳು ಅಥವಾ ಚಿಂತನೆಗಳಿಗೆ ಸಂಬಂಧಿಸಿದ ಸಂಶೋಧನಾ ಯೋಜನೆಗಳು, ಕುವೆಂಪು ಸಾಹಿತ್ಯದ ಅನುವಾದ ಯೋಜನೆಗಳು ಮುಂತಾದ ವಿಷಯಗಳ ಬಗ್ಗೆ ಕನಿಷ್ಟ 5 ಪುಟಗಳ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅಗತ್ಯ ದಾಖಲೆಗಳು ಹಾಗೂ ಅರ್ಜಿಯೊಂದಿಗೆ (ಹಾರ್ಡ್ ಕಾಪಿ) ನಿಗದಿತ ಕೊನೆಯ ದಿನಾಂಕದ ಒಳಗೆ ಪ್ರಾಧಿಕಾರಕ್ಕೆ ತಲುಪಿಸಬೇಕು. ಪ್ರಸ್ತಾವನೆ ಹಾಗೂ ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್, ಕುವೆಂ...