ಭಾರತ, ಫೆಬ್ರವರಿ 18 -- FASTag rules: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಕೆಲವು ಗಂಟೆಗಳ ಮೊದಲೇ ಫಾಸ್ಟ್ಯಾಗ್ ಖಾತೆಯಲ್ಲಿರುವ ಹಣದ ಮೊತ್ತ ಗಮನಿಸಿ. ಕಡಿಮೆ ಇದ್ದರೆ ಕೂಡಲೇ ರೀಚಾರ್ಜ್‌ ಮಾಡಿ. ಸೋಮವಾರ (ಫೆ 17) ಫಾಸ್ಟ್ಯಾಗ್ ಸಂಬಂಧಿಸಿದ ಹೊಸ ನಿಯಮ ಜಾರಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹದ ಫಾಸ್ಟ್ಯಾಗ್‌ (FASTag) ಬಳಕೆ ಸಂಬಂಧಿಸಿ ಹೊಸ ನಿಯಮಗಳನ್ನು ಟೋಲ್ ಸಂಗ್ರಹ ವ್ಯವಸ್ಥೆಯನ್ನು ಏಕಸೂತ್ರದಲ್ಲಿ ಜೋಡಿಸುವುದಕ್ಕಾಗಿ, ವಂಚನೆ ತಡೆಯುವುದಕ್ಕಾಗಿ ತರಲಾಗುತ್ತಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ತಿಳಿಸಿದೆ.

1) ಕಪ್ಪು ಪಟ್ಟಿಗೆ ಸೇರಿಸಿದ ಫಾಸ್ಟ್ಯಾಗ್‌ಗಳು: ಒಂದೊಮ್ಮೆ ಫಾಸ್ಟ್ಯಾಗ್‌ ಕಪ್ಪುಪಟ್ಟಿಗೆ ಸೇರ್ಪಡೆಯಾಗಿದ್ದರೆ, ಟೋಲ್ ಗೇಟ್‌ನಲ್ಲಿ ಅದರಲ್ಲಿರುವ ಹಣ ಪಾವತಿಯಾಗದು. ಹೊಸ ನಿಯಮ ಪ್ರಕಾರ, ಫಾಸ್ಟ್ಯಾಗ್‌ ಅನ್ನು ಕನಿಷ್ಠ 10 ನಿಮಿಷ ಮೊದಲು ಕಪ್ಪು ಪಟ್ಟಿಗೆ ಸೇರ್ಪಡೆಯಾದರು ಕೂಡ, ಟೋಲ್ ಗೇಟ್‌ನಲ್ಲಿ ಮುಂದೆ ಸಾಗಲು ಫಾಸ್ಟ್ಯಾಗ್ ಕೆಲಸ ಮಾಡದು.

2) ...