ಭಾರತ, ಫೆಬ್ರವರಿ 22 -- ಹಿಂದೂಗಳ ಹಬ್ಬ ಹೋಳಿಯನ್ನು 'ಛಪ್ರಿಗಳ ಹಬ್ಬ (ಜಾತಿವಾದಿ ನಿಂದನೆ)' ಎಂದು ಕರೆದ ಆರೋಪದ ಮೇಲೆ ಚಲನಚಿತ್ರ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ವಿರುದ್ಧ ದೂರು ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ಖಾರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಎಬಿಪಿ ನ್ಯೂಸ್‌ ವರದಿ ಮಾಡಿದೆ. ಫೆಬ್ರವರಿ 20ರಂದು ಸೆಲೆಬ್ರಿಟಿ ಮಾಸ್ಟರ್‌ಶೆಫ್‌ನಲ್ಲಿ ನಡೆದ ಸಂಚಿಕೆಯಲ್ಲಿ ಫರಾ ಈ ಹೇಳಿಕೆ ನೀಡಿದ್ದರು. ಹಿಂದೂಸ್ತಾನಿ ಭಾವು ಎಂದೇ ಪ್ರಸಿದ್ಧರಾದ ವಿಕಾಶ್ ಫಟಕ್ ಅವರು ದೂರು ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿಕಾಶ್ ಫಟಕ್ ಅವರ ವಕೀಲರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ. "ಫರಾ ಖಾನ್‌ ನೀಡಿರುವ ಹೇಳಿಕೆಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅವಮಾನಿಸಿದೆ ಎಂದು ನನ್ನ ಕಕ್ಷಿದಾರರು ಹೇಳಿದ್ದಾರೆ. ಪವಿತ್ರ ಹಬ್ಬವನ್ನು ವಿವರಿಸಲು ಅವರು ಛಪ್ರಿಸ್‌ ಎಂಬ ಪದವನ್ನು ಬಳಸಿರುವುದು ಅನುಚಿತವಾಗಿದೆ. ಇದು ಕೋಮು ಉದ್ವಿಗ್ನತೆ ಉಂಟು ಮಾಡುವ ಸಾಧ್ಯತೆ ಇರುವ ಹೇಳಿಕೆಯಾಗಿದೆ" ಎ...