Hyderabad, ಮಾರ್ಚ್ 12 -- ರವಿಕೆಯ ಮುಂಭಾಗ ಮತ್ತು ಹಿಂಭಾಗದ ಡಿಸೈನ್:ಸೀರೆಗಾಗಿ ಶಾಪಿಂಗ್ ಮಾಡಿದ ನಂತರ,ಮುಂದಿನದು ರವಿಕೆಯನ್ನು ಯಾವ ರೀತಿ ಹೊಲಿಸುವುದು ಎಂಬ ಯೋಚನೆ ಎಲ್ಲರಲ್ಲೂ ಇರುತ್ತದೆ. ಒಂದು ಕುಪ್ಪಸ ಸೀರೆಯ ಸಂಪೂರ್ಣ ಲುಕ್ ಅನ್ನು ಬದಲಾಯಿಸಬಹುದು. ಕುಪ್ಪಸ ಹೊಲಿಯುವ ಮೊದಲು, ಇತ್ತೀಚಿನ ಟ್ರೆಂಡಿಂಗ್ ವಿನ್ಯಾಸಗಳು ಇಲ್ಲಿವೆ. ಬ್ಲೌಸ್‌ನ ಮುಂಭಾಗ ಮತ್ತು ಹಿಂಭಾಗದ ಕೆಲವು ಅಲಂಕಾರಿಕ ವಿನ್ಯಾಸಗಳು ಇಲ್ಲಿವೆ.

ಫ್ಯಾನ್ಸಿ ಫ್ರಂಟ್ ನೆಕ್‌ಲೈನ್:ರವಿಕೆಯ ಮುಂಭಾಗಕ್ಕೆ ಈ ರೀತಿಯ ಫ್ಯಾನ್ಸಿ ನೆಕ್ ಲೈನ್ ಅನ್ನು ನೀವು ಆಯ್ಕೆ ಮಾಡಬಹುದು. ಪ್ರತಿಯೊಂದು ಬ್ಲೌಸ್‌ನಲ್ಲಿಯೂ ಒಂದೇ ರೀತಿಯ ಸರಳವಾದಯುಮತ್ತು ವಿಆಕಾರದ ಡಿಸೈನ್ ಮಾಡುವ ಬದಲು,ಈ ಟ್ರೆಂಡಿ ವಿನ್ಯಾಸವನ್ನು ಹೊಲಿಸಿ. ಇದು ಸಖತ್ ಸ್ಟೈಲಿಶ್ ಆಗಿಯೂ ಕಾಣುತ್ತದೆ.

ಚೋಲಿ ಕಟ್ ಬ್ಲೌಸ್ ವಿನ್ಯಾಸ:ಇತ್ತೀಚಿನ ದಿನಗಳಲ್ಲಿ ಚೋಲಿ ಕಟ್ ಬ್ಲೌಸ್ ವಿನ್ಯಾಸ ಸಾಕಷ್ಟು ಟ್ರೆಂಡ್ ಆಗಿದೆ. ಬ್ಲೌಸ್‌ಗೆ ಫ್ಯಾನ್ಸಿ ಪ್ಯಾಟರ್ನ್ ಅನ್ನು ಸಹ ಆಯ್ಕೆ ಮಾಡಬಹುದು. ಇದರ ನೆಕ್ ಡಿಸೈನ್ ಸಾಕಷ್ಟು ಆಕ...