Bengaluru, ಫೆಬ್ರವರಿ 21 -- ಬೇಸಿಗೆ ಬಂದರೆ ಸಾಕು, ಫ್ಯಾನ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಲ್ಲೂ ಈಗಿನ ದಿನಗಳಲ್ಲಿ ಹಿಂದಿನ ವರ್ಷಗಳಿಗಿಂತಲೂ ಬಿಸಿಲು ದಿನವೂ ಅಧಿಕವಾಗುತ್ತಾ ಹೋಗುತ್ತಿದೆ. ಹೀಗಾಗಿ ಮನೆಯಲ್ಲಿ ಬಿಸಿಲಿನ ತಾಪ ತಣಿಸಲು ಫ್ಯಾನ್ ಅಗತ್ಯ. ಎಲ್ಲರಿಗೂ ಕೂಲರ್, ಎಸಿ ಖರೀದಿಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಜನರು ಫ್ಯಾನ್ ಮೊರೆ ಹೋಗಿರುತ್ತಾರೆ. ಹೀಗಾಗಿ ಸೀಲಿಂಗ್ ಫ್ಯಾನ್ ಬಳಸುವ ಮೊದಲೊಮ್ಮೆ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಒಳಿತು. ಹಾಗೆ ಮಾಡುವುದರಿಂದ ಫ್ಯಾನ್ ಉತ್ತಮವಾಗಿ ಗಾಳಿಯನ್ನು ನೀಡುತ್ತದೆ. ಅದಕ್ಕಾಗಿ ಫ್ಯಾನ್ ಸ್ವಚ್ಛಗೊಳಿಸುವುದು ಅಗತ್ಯ. ನಿಮ್ಮ ಸೀಲಿಂಗ್ ಫ್ಯಾನ್ ಮೊದಲಿನಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಗಮನಿಸಿದ್ದರೆ, ಅದನ್ನು ಪೂರ್ತಿಯಾಗಿ ಒಮ್ಮೆ ಸ್ವಚ್ಛಗೊಳಿಸಿ. ಫ್ಯಾನ್ ಬ್ಲೇಡ್‌ಗಳಲ್ಲಿ ಅಧಿಕ ಪ್ರಮಾಣದ ಕೊಳೆ ಮತ್ತು ಧೂಳು ಸಂಗ್ರಹವಾದಾಗ, ಅವು ಗಾಳಿಯನ್ನು ಪರಿಣಾಮಕಾರಿಯಾಗಿ ಪರಿಚಲನೆ ಮಾಡುವಲ್ಲಿ ಕಡಿಮೆ ಪರಿಣಾಮಕಾರಿಯಾಗುತ್ತವೆ. ನಿಮ...