ಭಾರತ, ಫೆಬ್ರವರಿ 9 -- ನಮ್ಮ ಮುಖ ಆರೋಗ್ಯದಿಂದ ಕಳಕಳಿಯಾಗಿ, ಸುಂದರವಾಗಿ ಕಾಣಿಸಬೇಕು ಎಂದರೆ ಚರ್ಮದ ಆರೈಕೆ ಬಹಳ ಮುಖ್ಯ. ಸರಿಯಾದ ವಿಧಾನವನ್ನು ಅನುಸರಿಸುವ ಮೂಲಕ, ದೀರ್ಘಕಾಲದವರೆಗೆ ತ್ವಚೆಯ ಅಂದ, ಆರೋಗ್ಯ ಕೆಡದಂತೆ ಇರಿಸಿಕೊಳ್ಳಬಹುದು. ಚರ್ಮದ ಅಂದ ಕಾಪಾಡಿಕೊಳ್ಳಲು ಸರ್ಕಸ್‌ ಮಾಡಬೇಕು ಅಂತಿಲ್ಲ, ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕು ಅಂತಲೂ ಇಲ್ಲ.

ಪ್ರತಿದಿನ ಸ್ವಚ್ಛವಾಗಿ ತೊಳೆದುಕೊಳ್ಳುವುದು, ಮಾಯಿಶ್ಚರೈಸರ್ ಬಳಸುವುದು ಮತ್ತು ಟೋನಿಂಗ್ ಮಾಡುವ ಸಿಎಂಟಿ ವಿಧಾನವನ್ನು ಅನುಸರಿಸಬೇಕು. ಮೊದಲ ಹಂತವೆಂದರೆ ಶುದ್ಧೀಕರಣ, ಅಂದರೆ ಮುಖವನ್ನು ಚೆನ್ನಾಗಿ ತೊಳೆಯುವುದು. ಇದು ಬಹಳ ಮುಖ್ಯವಾದ ಹೆಜ್ಜೆ. ಮುಖದಿಂದ ಕೊಳಕು, ಧೂಳು ಮತ್ತು ಹೆಚ್ಚುವರಿ ಎಣ್ಣೆಯಾಂಶವನ್ನು ತೆಗೆದುಹಾಕಲು ಮುಖ ತೊಳೆಯುವುದು ಅತ್ಯಗತ್ಯ.

ಆದರೆ ಹಲವರು ಮುಖ ತೊಳೆಯುವಾಗ ಕೆಲವು ತಪ್ಪು ವಿಧಾನಗಳನ್ನು ಅನುಸರಿಸುತ್ತಾರೆ. ಅದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ಬೇಗನೆ ವಯಸ್ಸಾದ ಲಕ್ಷಣಗಳು ಮುಖದಲ್ಲಿ ಕಾಣಿ...