Bengaluru, ಫೆಬ್ರವರಿ 14 -- ನಮ್ಮ ಕಣ್ಣುಗಳು ನಮ್ಮ ದೈನಂದಿನ ಜೀವನದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಡೆಗಟ್ಟಲು ಅವುಗಳ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಅತ್ಯಗತ್ಯ. ಕಣ್ಣಿನ ಬಗ್ಗೆ ನೀವು ಎಷ್ಟೇ ಕಾಳಜಿವಹಿಸಿದರೂ ನಮ್ಮ ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ನಾವು ತೆಗೆದುಕೊಳ್ಳುವ ಔಷಧಿಗಳು ನಮ್ಮ ಕಣ್ಣಿನ ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಅದರಲ್ಲೂ ಮಧುಮೇಹ, ತೂಕ ನಷ್ಟ, ರಕ್ತದೊತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗೆ ಸೇರಿದಂತೆ ಇತರ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಅನೇಕ ಔಷಧಿಗಳು ಕಣ್ಣಿನ ಆರೋಗ್ಯದ ಮೇಲೆ ಋಣಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತವೆ.

ತೂಕ ನಷ್ಟ ಅಥವಾ ಮಧುಮೇಹ ನಿಯಂತ್ರಣಕ್ಕಾಗಿ ನೀವು ಸೆಮಾಗ್ಲುಟೈಡ್ ಅಥವಾ ಟಿರ್ಜೆಪಾಟೈಡ್ ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ, ಇದು ನಿಮ್ಮ ದೃಷ್ಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಹೊಸ ಅಧ್ಯಯನವೊಂದ...