ಭಾರತ, ಮೇ 15 -- Mollywood vs sandalwood: ಕೇವಲ ಒಬ್ಬಿಬ್ಬರನ್ನು ನಂಬಿ ಕೂತರೇ ಏನೂ ಆಗದು. ಅದಕ್ಕೆ ವೈಯಕ್ತಿಕ ಸಾಧನೆ ಎನ್ನುತ್ತಾರೆಯೇ ಹೊರತೂ ಮತ್ತೇನಲ್ಲ. ಅದರಿಂದ ಇಂಡಸ್ಟ್ರಿಗೆ ಹೆಸರು ಬರಬಹುದೇ ಹೊರತು, ಇಂಡಸ್ಟ್ರಿ ಬೆಳೆಯಿತು ಎಂದು ಹೇಳುವುದಕ್ಕಾಗದು. ಇದು ಕನ್ನಡ ಚಿತ್ರೋದ್ಯಮದ ಇಂದಿನ ವಾಸ್ತವ ಸ್ಥಿತಿ! ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮ ಬೆಳೆದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪರಭಾಷಿಕರೂ ಕನ್ನಡದ ಸಿನಿಮಾಗಳನ್ನು ಎತ್ತಿ ಮೆರೆಸುತ್ತಿದ್ದಾರೆ. ಅಷ್ಟಕ್ಕೂ ಕನ್ನಡದ ಎಷ್ಟು ಸಿನಿಮಾಗಳಿಗೆ ಆ ಸೌಭಾಗ್ಯ ಸಿಕ್ಕಿದೆ? ಈ ನಾಲ್ಕೇ ತಿಂಗಳ ಅವಧಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 80ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿವೆಯಾದರೂ, ಗೆದ್ದಿದ್ದು ಮಾತ್ರ ಬೆರಳೆಣಿಕೆ ಚಿತ್ರಗಳು ಮಾತ್ರ!

ನಮ್ಮ ಪಕ್ಕದಲ್ಲಿಯೇ ಮಾಲಿವುಡ್‌ ಚಿತ್ರರಂಗವಿದೆ. ಮಲಯಾಳಂ ಸಿನಿಮಾಕ್ಷೇತ್ರದ ವ್ಯಾಪ್ತಿ ಕಡಿಮೆಯಾದರೂ, ಇತ್ತೀಚಿನ ಒಂದಷ್ಟು ಬದಲಾವಣೆಗಳು ದೊಡ್ಡ ಮುನ್ಸೂಚನೆಯನ್ನೇ ನೀಡಿವೆ. ನಮ್ಮಲ್ಲೂ ನೂರು ಕೋಟಿ, ಇನ್ನೂರು ಕೋಟಿ ಕಲೆಕ್...