ಭಾರತ, ಮಾರ್ಚ್ 25 -- ಐಪಿಎಲ್ 2025ರ ಆವೃತ್ತಿಯು ದಿನದಿಂದ ದಿನಕ್ಕೆ ರೋಚಕ ಹಂತ ತಲುಪುತ್ತಿದೆ. ಸೋಮವಾರ (ಮಾ.24) ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರೋಚಕ ಜಯ ಸಾಧಿಸಿತು. ಪಂದ್ಯವು ಹಲವು ತಿರುವುಗಳಿಗೆ ಸಾಕ್ಷಿಯಾಯ್ತು. ಒಂದು ಮುಖ್ಯ ಅಂಶವೆಂದರೆ, ಐಪಿಎಲ್‌ 2025ರಲ್ಲಿ ಜಾರಿಗೆ ತರಲಾದ ಒಂದು ನಿಯಮವು ಪಂದ್ಯದ ಗತಿಯನ್ನೇ ಬದಲಿಸಿದೆ. ಚೇಸಿಂಗ್‌ ವೇಳೆ ಡೆಲ್ಲಿ ಪರ ಅಬ್ಬರಿಸುತ್ತಿದ್ದ ಟ್ರಿಸ್ಟಾನ್ ಸ್ಟಬ್ಸ್, ಎದುರಾಳಿ ತಂಡವು ಐಪಿಎಲ್ ಹೊಸ ನಿಯಮದ ಲಾಭವನ್ನು ಸಮಯೋಚಿತವಾಗಿ ಬಳಸಿದ ಕಾರಣದಿಂದ ಬೇಗನೆ ಔಟಾಗಿದ್ದಾರೆ.

ಡೆಲ್ಲಿ ಚೇಸಿಂಗ್ ವೇಳೆ 13ನೇ ಓವರ್‌ನ ಮೂರನೇ ಎಸೆತದಲ್ಲಿ ಸ್ಟಬ್ಸ್‌ ಔಟಾದರು. ಮಣಿಮಾರನ್ ಸಿದ್ಧಾರ್ಥ್, ಸ್ಟಬ್ಸ್‌ ವಿಕೆಟ್‌ ಪಡೆದರು. ಈ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸ್ಟಬ್ಸ್ ಮಾರುದ್ದದ ಸಿಕ್ಸರ್‌ ಸಿಡಿಸಿದ್ದರು. ಅದರಲ್ಲಿ ಎರಡನೇ ಸಿಕ್ಸರ್‌ ಭಾರಿ ದೊಡ್ಡದಾಗಿತ್ತು. ಆ ಹೊಡೆತಕ್ಕೆ ಚೆಂಡು ಮೈದಾನದಿಂದ ಹೊರ ಹೋಯ್ತು. ಸ್ಟಬ್ಸ್‌ ಆಕ್ರಮಣಕಾರಿ ಆಟ ಮು...