ಭಾರತ, ಮೇ 5 -- 2025ರ ಐಪಿಎಲ್‌ ಪಂದ್ಯಾವಳಿಯಲ್ಲಿ ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇನ್ನು ಎರಡು ವಾರಗಳಲ್ಲಿ ಈ ಬಾರಿಯ ಚಾಂಪಿಯನ್‌ ತಂಡ ಯಾವುದು ಎಂಬುದು ಖಚಿತವಾಗುತ್ತದೆ. ಟೂರ್ನಿಯಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ ತಂಡಗಳು ಗೆದ್ದು ಬೀಗಿದವು. ಸದ್ಯ ಟೂರ್ನಿಯ ಪ್ಲೇಆಫ್‌ ಲೆಕ್ಕಾಚಾರ ಜೋರಾಗಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್ ತಂಡಗಳು ಟೂರ್ನಿಯಿಂದ ಎಲಿಮನೇಟ್‌ ಆಗಿವೆ. ಹೀಗಾಗಿ ಅಗ್ರ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಲು ಇನ್ನೂ 8 ತಂಡಗಳು ಅವಕಾಶ ಹೊಂದಿವೆ.

ಎಲ್ಲಾ ತಂಡಗಳಿಗೆ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಸಾಧ್ಯವಿಲ್ಲ.‌ ಹೀಗಾಗಿ ಕೊನೆಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳು ಪ್ಲೇಆಫ್‌ ಪ್ರವೇಶಿಸಬಹುದು. ಈಗಾಗಲೇ ನಾಲ್ಕು ತಂಡಗಳು ಲೀಗ್‌ನಲ್ಲಿ 7 ಪಂದ್ಯಗಳನ್ನು ಗೆದ್ದು 14 ಅಂಕಗಳ ಗಡಿಯನ್ನು ತಲುಪಿವೆ. ಈ ನಾಲ್ಕು ತಂಡಗಳು ಹೆಚ್ಚ...