ಭಾರತ, ಫೆಬ್ರವರಿ 5 -- ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ತಂದಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಗುರಿಯೊಂದಿಗೆ ಎಲ್ಐಸಿ ಬಿಮಾ ಸಖಿ ಯೋಜನೆಯನ್ನು (lic bima sakhi yojana) ಆರಂಭಿಸಿದ್ದಾರೆ. ಈ ಯೋಜನೆಗೆ ಸೇರುವ ಎಲ್ಲಾ ಮಹಿಳೆಯರನ್ನು ಈಗ ಬಿಮಾ ಸಖಿ ಎಂದೇ ಕರೆಯಲಾಗುತ್ತದೆ. ಬಿಮಾ ಸಖಿ ಯೋಜನೆಯಡಿಯಲ್ಲಿ, 18ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ ಮೂರು ವರ್ಷಗಳ ಕಾಲ ವಿಶೇಷ ತರಬೇತಿ ಮತ್ತು ಸ್ಟೈಫಂಡ್ ನೀಡಲಾಗುತ್ತದೆ. ಈ ಯೋಜನೆ ಕುರಿತ ವಿವರ ಇಲ್ಲಿದೆ.

ಈ ಯೋಜನೆಯಿಂದ ಎರಡು ರೀತಿಯ ಪ್ರಯೋಜನವಿದೆ. ಒಂದು ಕಡೆ, ಯೋಜನೆಗೆ ನೋಂದಾಯಿಸುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿದ್ದಾರೆ. ಅವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಇದೇ ವೇಳೆ ಮಹಿಳೆಯರಲ್ಲಿ ವಿಮಾ ಜಾಗೃತಿಯನ್ನು ಹೆಚ್ಚಿಸಿ ಜನರು ಹೆಚ್ಚು ವಿಮೆ ಪಾಲಿಸಿಗಳನ್ನು ಮಾಡಿಸುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಮತ್...