ಭಾರತ, ಏಪ್ರಿಲ್ 24 -- ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ (ಏ.23) ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್‌ ಪಂದ್ಯವು ಕೆಲವೊಂದು ಆಶ್ಚರ್ಯಕರ ಸನ್ನಿವೇಶಗಳ ಗೂಡಾಯಿತು. ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡದ ಬ್ಯಾಟರ್ ಇಶಾನ್ ಕಿಶನ್ ಔಟಾದ ರೀತಿಗೆ ನೋಡುಗರು ಅಚ್ಚರಿಪಟ್ಟರು. ಬಹುಶಃ ಐಪಿಎಲ್‌ನಲ್ಲಿ ಇದೊಂದು ನಾಟಕೀಯ ಮತ್ತು ಅಸಾಮಾನ್ಯ ರೀತಿಯ ಔಟ್‌ ಎಂದು ಹೇಳಬಹುದು. ದೀಪಕ್ ಚಹರ್ ಎಸೆತವು ಲೆಗ್‌ಸೈಡ್‌ನಲ್ಲಿ ಹಾದು ಹೋಯ್ತು. ಇದನ್ನು ಎದುರಿಸಲು ಯತ್ನಿಸಿದ ಇಶಾನ್ ಬ್ಯಾಟ್‌ಗೆ ಚೆಂಡು ಸಿಗಲಿಲ್ಲ. ಈ ವೇಳೆ ವಿಕೆಟ್ ಕೀಪರ್ ರಿಯಾನ್ ರಿಕೆಲ್ಟನ್ ಚೆಂಡನ್ನು ಹಿಡಿದರು. ಅಚ್ಚರಿಯೆಂದರೆ, ಅಷ್ಟರಲ್ಲೇ ಅಂಪೈರ್‌ ಔಟ್‌ ಎಂಬ ಸಿಗ್ನಲ್‌ ಮಾಡಿದರು.

ಚೆಂಡನ್ನು ಹಿಡಿದ ರಿಕಲ್ಟನ್‌ ಆಗಲಿ ಅಥವಾ ಚಹರ್ ಆಗಲಿ ಔಟ್‌ಗೆ ಮನವಿ (ಅಪೀಲ್) ಮಾಡಲಿಲ್ಲ. ಅವರಿಗೆ ಆ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂಬ ಸ್ಪಷ್ಟತೆ ಇತ್ತು. ಆನ್-ಫೀಲ್ಡ್ ಅಂಪೈರ್ ವಿನೋದ್ ಶೇಷನ್ ಕೂಡಾ ಆ ಎಸೆತವನ್ನು ಆರಂಭ...