ಬೆಂಗಳೂರು, ಮೇ 26 -- ಐಪಿಎಲ್ 2025ರ ಲೀಗ್ ಹಂತದ ಪಂದ್ಯಗಳು ಬಹುತೇಕ ಮುಕ್ತಾಯಗೊಂಡಿದೆ. ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿ ಉಳಿದಿದ್ದು, ಇನ್ನೂ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದು ಕ್ವಾಲಿಫೈಯರ್ 1ರಲ್ಲಿ ಆಡುವ ತಂಡಗಳು ಯಾವುವು ಎಂಬುದು ಅಂತಿಮವಾಗಿಲ್ಲ. ಅಸಲಿಗೆ ಈ ಅವಕಾಶ ಈಗ ಅಗ್ರಸ್ಥಾನದಲ್ಲಿರುವ ನಾಲ್ಕು ತಂಡಗಳಿಗೂ ಇವೆ. ಸಿಎಸ್‌ಕೆ ವಿರುದ್ಧ ಸೋತ ನಂತರ ಪ್ಲೇಆಫ್‌ಗೆ ಹೋಗುವ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಇದೀಗ ಮೊದಲ ಎರಡು ಸ್ಥಾನದಲ್ಲಿ ಉಳಿಯಲು ತಂಡ ಬೇರೆ ತಂಡವನ್ನು ಅವಲಂಬಿಸಬೇಕಾಗಿದೆ.
ಸಿಎಸ್‌ಕೆ ವಿರುದ್ಧ ಸೋಲಿನ ನಂತರ, ಜಿಟಿ ತಂಡ ಪ್ರಸ್ತುತ 14 ಪಂದ್ಯಗಳಿಂದ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ಪಂದ್ಯವನ್ನು ಆಡಲು ಬಾಕಿ ಇರುವುದರಿಂದ, ಟಾಪ್ 2 ರೇಸ್‌ನಲ್ಲಿ ಉಳಿಯುವ ಅದೃಷ್ಟ ಬೇರೆ ತಂಡದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.