Bangalore, ಫೆಬ್ರವರಿ 23 -- Agama Education: ಮುಜರಾಯಿ ಇಲಾಖೆಯು ಹಲವಾರು ವರ್ಷಗಳಿಂದ ಆಗಮ ಶಿಕ್ಷಣವನ್ನು ನಡೆಸಿಕೊಂಡು ಬರುತ್ತಿದೆ. ಇದರಲ್ಲಿ ಶವ ಸಂಬಂಧದ ಶೈವಾಗಮ, ವೀರಶೈವಾಗಮ, ವಾತುಲಾಗಮ, ಜೈನಕ್ಕೆ ಸಂಬಂಧಿಸಿದ ಜೈನಾಗಮ, ವಿಷ್ಣು ಸಂಬಂಧವಾದ ಪಾಂಚರಾತ್ರಾಗಮ, ವೈಖಾನಸಾಗಮ, ತಂತತ್ರಸಾರಾಗಮ ಸೇರಿ ಒಟ್ಟು ಏಳು ವಿಷಯಗಳ ಮೇಲೆ ಶಿಕ್ಷಣ ನೀಡಲಾಗುತ್ತಿದೆ. ಕರ್ನಾಟಕದಲ್ಲೂ ಹಲವು ಭಾಗಗಳಲ್ಲಿ ಈ ಶಿಕ್ಷಣ ನೀಡಲಾಗುತ್ತಿದ್ದು. ಈ ಶಿಕ್ಷಣ ಪಡೆಯಲು ಇರುವ ಕನಿಷ್ಠ ಅಂಶಗಳು, ಹೇಗೆ ಶಿಕ್ಷಣ ಪಡೆಯಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಇದರಲ್ಲಿ ಮೂರು ವರ್ಷದ ಪ್ರವರ ಹಾಗೂ ಎರಡು ವರ್ಷದ ಪ್ರವೀಣ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಪ್ರವರ ಪರೀಕ್ಷೆ ಪದವಿ ರೀತಿಯದ್ದಾಗಿದ್ದು, ಪ್ರವೀಣ ಸ್ನಾತಕೋತ್ತರ ಪದವಿಯಿದ್ದ ಹಾಗೆ. ಪ್ರವೀಣ ಪರೀಕ್ಷೆ ತೆಗೆದುಕೊಳ್ಳಲು ಪ್ರವರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಐದು ವರ್ಷ ಶಿಕ್ಷಣ ಪೂರೈಸಿದವರಿಗೆ ದೇವಸ್ಥಾನಗಳು, ಮಠಗಳಲ್ಲಿ ಅರ್ಚಕರಾಗಲು ಅವಕಾಶ ಸಿಗಲಿದೆ. ಇದಲ್ಲದೇ ವಿದೇಶಗಳಲ್...