ಬೆಂಗಳೂರು, ಮಾರ್ಚ್ 23 -- ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ 18ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ 7 ವಿಕೆಟ್​ಗಳ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಭಿಯಾನ ಆರಂಭಿಸಿದೆ. ಕೆಕೆಆರ್​ ನೀಡಿದ್ದ 175 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಆರ್​ಸಿಬಿ, 22 ಎಸೆತಗಳು ಬಾಕಿ ಇರುವಂತೆ ಗೆಲುವಿನ ಕೇಕೆ ಹಾಕಿತು. ಆದರೆ ಈ ಪಂದ್ಯದಲ್ಲಿನ ಹಿಟ್​ ವಿಕೆಟ್ ವಿವಾದ ಹೆಚ್ಚು ಸದ್ದು ಮಾಡುತ್ತಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಕೆಕೆಆರ್ ಇನ್ನಿಂಗ್ಸ್​ ಆರಂಭಿಸಿತು. ಇನ್ನಿಂಗ್ಸ್​ ಮೊದಲ ಓವರ್​ನಲ್ಲೇ ಕ್ವಿಂಟನ್ ಡಿ ಕಾಕ್​ರನ್ನ ಕಳೆದುಕೊಂಡ ಕೆಕೆಆರ್​ಗೆ ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೈನ್ ಬಿರುಸಿನ ಆಟದ ಮೂಲಕ ಆಸರೆಯಾದರು. 7ನೇ ಓವರ್​ ಆಗಿದ್ದಾಗ ವಿವಾದವೊಂದು ಸೃಷ್ಟಿಯಾಯಿತು. ಈ ಓವರ್​ನ 4ನೇ ...