Bengaluru, ಏಪ್ರಿಲ್ 12 -- ಐಐಟಿ - ಜೆಇಇ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ - ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್) ಅನ್ನು ಭಾರತೀಯ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳ ಪ್ರತಿಷ್ಠಿತ ಕಾಲೇಜುಗಳಾದ ಐಐಟಿ ಹಾಗು ಎನ್‌ಐಟಿ ಗಳಲ್ಲಿ ಪ್ರವೇಶಿಸಲು ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಕೆಲವೇ ಮಂದಿ ಅತಿ ಹೆಚ್ಚು ರ‍್ಯಾಂಕ್‌ ಗಳಿಸಿ, ತಮ್ಮ ಕನಸಿನ ಐಐಟಿ ಅಥವಾ ಎನ್‌ಐಟಿಗೆ ಪ್ರವೇಶ ಪಡೆಯುತ್ತಾರೆ.

ಈ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲೇ ಯಶಸ್ಸು ಸಾಧಿಸುವುದು ಕಷ್ಟದ ಕೆಲಸ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲದ ಕೆಲಸವಲ್ಲ. ಸರಿಯಾದ ಯೋಜನೆ, ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಹಾಗೂ ದೃಢ ಸಂಕಲ್ಪವಿದ್ದರೆ, ನೀವು ನಿಮ್ಮ ಮೊದಲ ಪ್ರಯತ್ನದಲ್ಲೇ ಈ ಗುರಿ ತಲುಪಬಹುದು.

ಅರ್ಥ ಮಾಡಿಕೊಂಡು ಓದುವುದು: ಪ್ರತಿ ಅಧ್ಯಾಯದ ಮೂಲಭೂತ ಸಿದ್ಧಾಂತಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ಓದುವುದು ಉತ್ತ...