Kalaburgi, ಏಪ್ರಿಲ್ 11 -- Employment News: ಕರ್ನಾಟಕದಲ್ಲಿ ಬೇಸಿಗೆ ರಜೆ ಶುರುವಾಗಿರುವ ನಡುವೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಎನ್ನಿಸಿರುವ ಕಲಬುರಗಿದಲ್ಲಿ ಮೇಳ ನಡೆಯಲಿದೆ, ಬಳಿಕ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲೂ ಮೇಳ ಇರಲಿದೆ. ಕಲಬುರಗಿಯಲ್ಲಂತೂ ಪ್ರಾದೇಶಿಕ ಮಟ್ಟದ ಉದ್ಯೋಗ ಮೇಳ ಆಯೋಜನೆಗೊಂಡಿದ್ದು, ಹೆಚ್ಚಿನ ಕಂಪೆನಿಗಳು ಭಾಗಿಯಾಗಲಿವೆ. ಇದೇ ರೀತಿ ಕೊಪ್ಪಳ ಜಿಲ್ಲೆ ಗಂಗಾವತಿಯ ಮೇಳದಲ್ಲೂ ಕರ್ನಾಟಕದ ನಾನಾ ಭಾಗಗಳಿಂದ ಕಂಪೆನಿಗಳು ಆಗಮಿಸಲಿದ್ದು, ಆ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಸಿಗಲಿದೆ. ಆಸಕ್ತರು ಎರಡೂ ಮೇಳಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಹಾಗೂ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ತಿಳಿಸಲಾಗಿದೆ.

ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವತಿಯಿಂದ ''ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳ-2025''ವನ್ನು ಏಪ್ರಿಲ್ 16 ರಂದು ಬೆಳಿಗ್ಗೆ 9 ...