Mysuru, ಏಪ್ರಿಲ್ 7 -- Employment:ಮೈಸೂರಿನಲ್ಲಿ ದಶಕಗಳ ಹಿಂದೆ ಆರಂಭಗೊಂಡು ಪ್ರತಿಷ್ಠಿತ ಸಂಸ್ಥೆಯಾಗಿ ಹೊರ ಹೊಮ್ಮಿರುವ ಕೇಂದ್ರೀಯ ಆಹಾರ ತಂತಜ್ಞಾನ ಸಂಶೋಧನಾಲಯ( CFTRI)ವು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. 2025ರ ಏಪ್ರಿಲ್‌ 7 ಹಾಗೂ 10 ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು ಮೇ 7 ಹಾಗೂ 10 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಲ್ಲಿ ಮೂರು ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಎಲ್ಲಾ ಹುದ್ದೆಗಳಿಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್‌ ಇಲ್ಲವೇ ಜುಲೈ ತಿಂಗಳಲ್ಲಿ ಪರೀಕ್ಷೆಯನ್ನು ನಡೆಸಿ ಆಯಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಿಎಫ್‌ಆರ್‌ಟಿಐನ ಆಡಳಿತ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

ಸಿಎಫ್‌ಟಿಆರ್‌ಐನಲ್ಲಿ ಖಾಲಿ ಇರುವ ಜೂನಿಯರ್‌ ಸೆಕ್ರೆಟ್ರಿಯೇಟ್‌ ಅಸಿಸ್ಟಂಟ್‌ ಹುದ್ದೆಗೆ ಮೇ 7ರ ಒಳಗೆ ಅರ್ಜಿ ಸಲ್ಲಿಸಬೇಕು. ಈ ವಿಭಾಗದಲ್ಲಿ ಒಟ್ಟು 10 ಹುದ್ದೆಗಳಿವೆ. ಈ ಹುದ್ದೆಗೆ ಗರಿಷ್ಠ ವಯೋಮಿತಿ 28 ವರ್ಷ. ವೇತನ ಶ್ರ...